• 09 April 2020 21:37
Jai Kannada
Jai Kannada
Blog single photo
March 24, 2020

ಮಿನಿಮಮ್ ಬ್ಯಾಲೆನ್ಸ್ ಶುಲ್ಕ ಮನ್ನಾ ಮಾಡಿದ ನಿರ್ಮಲಾ ಸೀತಾರಾಮನ್

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಉಳಿತಾಯ ಬ್ಯಾಂಕ್ ಖಾತೆಗಳ ಮಿನಿಮಮ್ ಬ್ಯಾಲನ್ಸ್ ಶುಲ್ಕಗಳನ್ನು ರದ್ದು ಮಾಡಿದ್ದಾರೆ. ಕೊರೊನಾ ವೈರಸ್ ಬಿಕ್ಕಟ್ಟಿನಿಂದ ಉಂಟಾದ ಲಾಕ್ ಡೌನ್ ನಿಭಾಯಿಸಲು ನಾಗರಿಕರಿಗೆ ನೆರವಾಗುವ ದೃಷ್ಟಿಯಿಂದ ಸಚಿವೆ ಈ ಆದೇಶ ನೀಡಿದ್ದಾರೆ.

ಇದಲ್ಲದೇ ಡೆಬಿಟ್ ಕಾರ್ಡ್ ಹೊಂದಿರುವವರು ಎಲ್ಲಾ ಬ್ಯಾಂಕುಗಳ ಎಟಿಎಂಗಳಿಂದ ಮುಂದಿನ ಮೂರು ತಿಂಗಳವರೆಗೆ ಉಚಿತ ಶುಲ್ಕದಲ್ಲಿ ಹಣವನ್ನು ವಿತ್ ಡ್ರಾ ಮಾಡಬಹುದು.

 ಜಿಎಸ್‌ಟಿ ರಿಟರ್ನ್ಸ್ ಫೈಲ್ ಮಾಡುವ ಗಡುವನ್ನು ಮಾರ್ಚ್- ಮೇನಿಂದ ಜೂನ್ 30ರವರೆಗೆ ಸೀತಾರಾಮನ್ ವಿಸ್ತರಿಸಿದ್ದಾರೆ. 5 ಕೋಟಿ ರೂ. ವಹಿವಾಟು ಹೊಂದಿರುವ ಕಂಪನಿಗಳಿಗೆ  ಜಿಎಸ್‌ಟಿ ರಿಟರ್ನ್ಸ್ ಸಲ್ಲಿಕೆಯನ್ನು ತಡವಾಗಿ ಮಾಡಿದರೆ ಯಾವುದೇ ತಡ ಶುಲ್ಕ, ದಂಡ ಅಥವಾ ಬಡ್ಡಿಯನ್ನು ವಿಧಿಸುವುದಿಲ್ಲ. ಕೊರೊನಾ ಬಿಕ್ಕಟ್ಟನ್ನು ನಿಯಂತ್ರಿಸಲು ಲಾಕ್ ಡೌನ್ ಮಾಡಿದ್ದರಿಂದ ಉಂಟಾದ ಸಂಕಷ್ಟ ನಿಭಾಯಿಸಲು ಸರ್ಕಾರ ಆರ್ಥಿಕ ಪ್ಯಾಕೇಜ್ ಬಿಡುಗಡೆ ಮಾಡುವುದಕ್ಕೆ ಕಾರ್ಯೋನ್ಮುಖವಾಗಿದೆ ಎಂದು ತಿಳಿಸಿದರು.

Recent Comments

Leave Comments

footer
Top