• 09 April 2020 21:16
Jai Kannada
Jai Kannada
Blog single photo
March 24, 2020

ಕೊರನಾ ವೈರಸ್‌ ಭೀತಿಯಿಂದ ಕಾರಿನಲ್ಲಿ ಹೊರಟಿದ್ದ ಮೂವರ ದುರ್ಮರಣ 

ಬಾಗಲಕೋಟೆ: ಕೊರೊನಾ ವೈರಸ್ ಭೀತಿಯಿಂದ ಬೆಂಗಳೂರಿನಿಂದ ಬೀದರ್ ಜಿಲ್ಲೆಗೆ ಕಾರಿನಲ್ಲಿ ಹೊರಟಿದ್ದಾಗ ಕಾರು ಬಂಡೆಗೆ ಡಿಕ್ಕಿಹೊಡೆದು ಮೂವರು ಸ್ಥಳದಲ್ಲೇ ಮೃತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಳಕಲ್ ತಾಲೂಕಿನ ಹಿರೇಕೊಡಗಲಿಯಲ್ಲಿ ಸಂಭವಿಸಿದೆ.

ಸವಿತಾ(20), ಬಸವಣ್ಣೆಪ್ಪ(70) ಮತ್ತು ಸುವರ್ಣ(40) ಮೃತಪಟ್ಟ ದುರ್ದೈವಿಗಳು. ಮೃತರು ಬೀದರ್ ಜಿಲ್ಲೆಯ ಬಾಲ್ಕಿಗೆ ಸೇರಿದವರು ಎಂದು ಗೊತ್ತಾಗಿದೆ. ಬೆಂಗಳೂರಿನಿಂದ ಬೀದರ್‌ಗೆ ಇಳಕಲ್ ಮಾರ್ಗವಾಗಿ ಹೊರಟಿದ್ದಾಗ ಹಿರೇಕೊಡಗತಿ ಬಳಿ ರಸ್ತೆ ತಿರುವು ಗೊತ್ತಾಗದೇ ಕಾರು ಕಲ್ಲುಬಂಡೆಗೆ ಡಿಕ್ಕಿ ಹೊಡೆದಿತ್ತು.

ತೀವ್ರವಾಗಿ ಗಾಯಗೊಂಡ 6 ಜನರ ಪೈಕಿ ಇಳಕಲ್ ಆಸ್ಪತ್ರೆಗೆ ಸಾಗಿಸುವ ವೇಳೆ ಇಬ್ಬರು ಸಾವನ್ನಪ್ಪಿದರೆ, ಬಾಗಲಕೋಟೆಗೆ ಹೋಗುವ ವೇಳೆ ಮತ್ತೊಬ್ಬರು ಸತ್ತಿದ್ದಾರೆ.  

Recent Comments

Leave Comments

footer
Top