• 09 April 2020 23:04
Jai Kannada
Jai Kannada
Blog single photo
March 24, 2020

ಮತ್ತೆ 5 ಹೊಸ ಪ್ರಕರಣ: 38ಕ್ಕೇರಿದ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ

ಬೆಂಗಳೂರು: ಕರ್ನಾಟಕದಲ್ಲಿ ಮಂಗಳವಾರ ಕೊರೊನಾ ವೈರಸ್‌ನ ಐದು ಹೊಸ ಪ್ರಕರಣಗಳನ್ನು ಗುರುತಿಸಲಾಗಿದ್ದು, ರಾಜ್ಯದಲ್ಲಿ ಕೊರೊನಾ ವೈರಾಣು ಸೋಂಕಿತರ ಸಂಖ್ಯೆ 38ಕ್ಕೇರಿದೆ. ಐವರು ಹೊಸ ಸೋಂಕಿತರ ಪೈಕಿ ಇಬ್ಬರು ಉತ್ತರ ಕನ್ನಡ ಜಿಲ್ಲೆಗೆ ಸೇರಿದವರಾಗಿದ್ದು, ಚಿಕ್ಕಬಳ್ಳಾಪುರ, ಬೆಂಗಳೂರು ಮತ್ತು ಕೇರಳದ ತಲಾ ಒಬ್ಬರು ಸೇರಿದ್ದಾರೆ. ಐದು ಹೊಸ ರೋಗಿಗಳಲ್ಲಿ ಇಬ್ಬರು ಮಹಿಳೆಯರಾಗಿದ್ದಾರೆ. ಗುರುತಿಸಲಾದ 38 ಪ್ರಕರಣಗಳಲ್ಲಿ ಕೇರಳಕ್ಕೆ ತೆರಳುತ್ತಿದ್ದ ಮೂವರು ಕರ್ನಾಟಕದ ಏರ್‌ಪೋರ್ಟ್‌ನಲ್ಲಿ ಇಳಿದಿದ್ದಾಗ ಸೋಂಕಿತರಾಗಿದ್ದು ಪತ್ತೆಯಾಗಿದೆ.

ಐದು ಹೊಸ ಪ್ರಕರಣಗಳಲ್ಲಿ , ನಾಲ್ವರು ಕೊಲ್ಲಿ ರಾಷ್ಟ್ರಗಳಿಗೆ ಪ್ರವಾಸದ ಇತಿಹಾಸ ಹೊಂದಿದ್ದರು.ಬೆಂಗಳೂರಿನ ಮಹಿಳೆಯೊಬ್ಬರು ಕೊರೊನಾ ಪಾಸಿಟಿವ್ ಆಗಿದ್ದ ಅವರ ಕುಟುಂಬದ ಸದಸ್ಯರೊಬ್ಬರಿಂದ ಸೋಂಕಿಗೊಳಗಾಗಿದ್ದರು. ಅವರ ಕುಟುಂಬದ ಸದಸ್ಯ ಕೊರೊನಾ ಪೀಡಿತ ರಾಷ್ಟ್ರವೊಂದರಿಂದ ಬಂದ ಮೇಲೆ ಸೋಂಕಿಗೊಳಗಾಗಿದ್ದರು. 

ಮಂಗಳವಾರ ಚಿಕ್ಕಬಳ್ಳಾಪುರದಲ್ಲಿ ಮೂರನೇ ಪ್ರಕರಣ ವರದಿಯಾಗಿದ್ದು, ಮೆಕ್ಕಾಗೆ ತೆರಳಿ ಹಿಂದಿರುಗಿದ್ದ 56 ವರ್ಷದ ಮಹಿಳೆ ಸೋಂಕಿತರಾಗಿದ್ದಾರೆ.ಅವರು ಇತ್ತೀಚೆಗೆ ಕೊರೊನಾ ಪಾಸಿಟಿವ್ ಆಗಿದ್ದ ತಾಯಿ ಮತ್ತು ಮಗನ ಸಂಬಂಧಿ ಮತ್ತು ಸಹ ಪ್ರಯಾಣಿಕರಾಗಿದ್ದರು. ಈ ಮೂವರು ಸೌದಿ ಅರೇಬಿಯಾದಿಂದ ಆಗಮಿಸಿ ಮಾ. 14ರಂದು ಹೈದರಾಬಾದಿನಲ್ಲಿ ಇಳಿದಿದ್ದರು.

ಉತ್ತರಕನ್ನಡದಲ್ಲಿ ದುಬೈಗೆ ಪ್ರಯಾಣ ಮಾಡಿದ ಇತಿಹಾಸವಿರುವ ಇಬ್ಬರು ಕೊರೊನಾ ಸೋಂಕಿತರಾಗಿದ್ದು, ಉತ್ತರ ಕನ್ನಡದ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿರಿಸಲಾಗಿದೆ.

Recent Comments

Leave Comments

footer
Top