• 09 April 2020 22:32
Jai Kannada
Jai Kannada
Blog single photo
March 24, 2020

ಕೊರೊನಾ ವೈರಸ್ ನಿರ್ಲಕ್ಷ್ಯ ವಹಿಸಿದರೆ ಅಪಾಯಕಾರಿ: ಡಾ.ಅಶ್ವತ್ಥ್ ನಾರಾಯಣ್ 

ಬೆಂಗಳೂರು: ಕೊರೊನಾ ವಿರುದ್ಧ ಹೋರಾಟಕ್ಕೆ ಸರ್ಕಾರ ಕ್ರಾಂತಿಕಾರಿ ನಿರ್ಧಾರವನ್ನು ತೆಗೆದುಕೊಂಡಿದೆ. ಕೊರೊನಾ ಸೋಂಕಿತ ಜನರನ್ನು ಕ್ವಾರಂಟೈನ್‌ನಲ್ಲಿಡಲು 20 ಸಾವಿರ ಹೊಟೆಲ್ ರೂಮ್. ಬುಕ್ ಮಾಡಲು ಚಿಂತನೆ ನಡೆಸಿದ್ದೇವೆ.  ಕೊರೊನಾ ವೈರಸ್ ಬಗ್ಗೆ ನಿರ್ಲಕ್ಷ್ಯವಹಿಸಿದರೆ, ಆತಂಕಕಾರಿ ಸನ್ನಿವೇಶ ಎದುರಾಗಬಹುದು ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ್ ಮಾಹಿತಿ ನೀಡಿದರು. 

ವಿದೇಶದಿಂದ ಆಗಮಿಸಿದ ಜನರನ್ನು ಕ್ವಾರಂಟೈನ್‌ನಲ್ಲಿಡಲಾಗಿದ್ದು,  ರಾಜ್ಯಾದ್ಯಂತ ಕೊರೊನಾ ಸೋಂಕು ಹರಡುವ ಭೀತಿ ಎದುರಾಗಿದೆ ಎಂದು ಸಚಿವರು ತಿಳಿಸಿದರು.  ವಿದೇಶದಿಂದ ಆಗಮಿಸಿರುವ ಸುಮಾರು 20 ಸಾವಿರ ಜನರು ಕ್ವಾರಂಟೈನ್‌ನಲ್ಲಿದ್ದಾರೆ ಎಂದು ಅವರು ತಿಳಿಸಿದರು.

ಈ ನಡುವೆ ಕ್ವಾರಂಟೈನ್‌ನಲ್ಲಿ ಇರುವವರ ಮನೆಗಳ ಸುತ್ತಮುತ್ತ ಸೋಡಿಯಂ ಕ್ಲೋರೈಡ್ ಬ್ಲೀಚಿಂಗ್ ಮಿಶ್ರಿತ ಔಷಧಿ ಸಿಂಪಡಣೆ ಮಾಡಲಾಗುತ್ತಿದೆ ಎಂದು ಅಶ್ವತ್ಥ್ ನಾರಾಯಣ್ ತಿಳಿಸಿದರು. ಕೊರೊನಾ ಸೋಂಕಿತರ ಉಸಿರಾಟದ ವ್ಯವಸ್ಥೆಗೆ ಒಂದು ಸಾವಿರ ವೆಂಟಿಲೇಟರ್‌ಗಳನ್ನು ಖರೀದಿಸಲಾಗುತ್ತಿದೆ ಎಂದು ಶ್ರೀರಾಮುಲು ಹೇಳಿದರು.

Recent Comments

Leave Comments

footer
Top