ನವದೆಹಲಿ: ನರೇಂದ್ರ ಮೋದಿ ಸರ್ಕಾರವು ಮುಂದಿನ ಬಜೆಟ್ನಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಗೆ 5 ಲಕ್ಷ ರೂ.ಆರೋಗ್ಯ ವಿಮೆ ಕವರೇಜ್ ನೀಡುವ ಸಾಧ್ಯತೆಯಿದೆ ಎಂದು ಹಿಂದಿ ದಿನಪತ್ರಿಕೆಯೊಂದು ವರದಿ ಮಾಡಿದೆ. ಫೆ. 1ರಂದು ಕೇಂದ್ರ ಬಜೆಟ್ ಮಂಡಿಸಲಿರುವ ಅರುಣ್ ಜೇಟ್ಲಿ ಆರೋಗ್ಯ ವಿಮೆ ಕ್ಷೇತ್ರಕ್ಕೆ ಕೇಂದ್ರೀ ಪ್ರಾಯೋಜಿತ ಯೋಜನೆಯಡಿ 5000 ಕೋಟಿ ರೂ.ಗಳನ್ನು ಹಂಚಿಕೆ ಮಾಡುವ ಸಾಧ್ಯತೆಯಿದೆ.
ಶೇ. 60ರಷ್ಟು ವೆಚ್ಚಗಳನ್ನು ಕೇಂದ್ರ ಸರ್ಕಾರ ಭರಿಸಿದರೆ, ಉಳಿದ ಶೇ. 40ರಷ್ಟು ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲಿದೆ. ಈ ಯೋಜನೆ ಜಾರಿಗೆ ಟ್ರಸ್ಟ್ ಒಂದರ ನೇಮಕಕ್ಕೆ ಕೂಡ ಸರ್ಕಾರ ಪರಿಶೀಲನೆ ನಡೆಸಿದ್ದು, ಅದರಡಿ ಪ್ರತಿಯೊಬ್ಬರಿಗೂ 3 ಲಕ್ಷದಿಂದ 5 ಲಕ್ಷ ರೂ. ವರೆಗೆ ಆರೋಗ್ಯ ವಿಮೆ ಸೌಲಭ್ಯವನ್ನು ಒದಗಿಸಲಾಗುತ್ತದೆ.
ಆರೋಗ್ಯ ವಿಮೆ ಯೋಜನೆಯನ್ನು ಮೂರು ವಿಧಗಳಾಗಿ ವಿಭಜಿಸಲಾಗಿದೆ. ಕಲ್ಯಾಣ ಯೋಜನೆಯು ಬಡತನರೇಖೆಯಡಿ ಜೀವಿಸುವ ಕಡುಬಡವರನ್ನು ಒಳಗೊಂಡಿದೆ. ಸೌಭಾಗ್ಯ ಯೋಜನೆಯಡಿ 2 ಲಕ್ಷ ವಾರ್ಷಿಕ ಆದಾಯ ಇರುವವರು ಮತ್ತು ಸರ್ವೋದಯ ಯೋಜನೆಯಲ್ಲಿ 2 ಲಕ್ಷಕ್ಕಿಂತ ಹೆಚ್ಚಿನ ಆದಾಯದವರು ಬರುತ್ತಾರೆ.
Recent Comments