• 09 April 2020 22:51
Jai Kannada
Jai Kannada
Blog single photo
March 23, 2020

ಇರಾನ್‌ನಲ್ಲಿ ಇಂದು ಕೊರೊನಾ ವೈರಸ್ ಮಹಾಮಾರಿಗೆ 127 ಬಲಿ 

ಟೆಹರಾನ್: ಮಧ್ಯಪ್ರಾಚ್ಯದಲ್ಲಿ ಕೊರನಾ ವೈರಸ್‌ನ ಭೀಕರ ದಾಳಿಯನ್ನು ಎದುರಿಸುತ್ತಿರುವ ಇರಾನ್ ದೇಶದಲ್ಲಿ ಇಂದು 127 ಜನರು ಮಾರಣಾಂತಿಕ ವೈರಸ್‌ನಿಂದ ಸಾವನ್ನಪ್ಪಿದ್ದಾರೆ. ಇದರಿಂದ ಪೆಡಂಭೂತವಾಗಿ ಕಾಡುತ್ತಿರುವ ವೈರಸ್ ದಾಳಿಗೆ ಸತ್ತವರ ಸಂಥ್ಯೆ 1812ಕ್ಕೇರಿದ್ದು, 23, 049 ಪ್ರಕರಣಗಳು ದೃಢೀಕರಣಗೊಂಡಿದೆ.

ಇರಾನ್ ಮುಂಚಿತವಾಗೇ ಕಠಿಣ ಕ್ವಾರಂಟೈನ್ ಕ್ರಮಗಳನ್ನು ಕೈಗೊಂಡಿಲ್ಲದಿರುವುದಿಂದ ವೈರಸ್ ವಿನಾಶಕಾರಿಯಾಗಿ ಪರಿಣಮಿಸಿದೆ ಎಂದು ವ್ಯಾಪಕ ಟೀಕೆಗಳನ್ನು ಎದುರಿಸುತ್ತಿದೆ. ಅಮೆರಿಕದ ತೀವ್ರ ದಿಗ್ಬಂಧನಗಳಿಗೆ ಗುರಿಯಾದ ಇರಾನ್ ತೀವ್ರ ಸಂಕಷ್ಟದಲ್ಲಿರುವ ಸಂದರ್ಭದಲ್ಲೇ ಮಹಾಮಾರಿ ವಕ್ಕರಿಸಿಕೊಂಡಿರುವುದು ಬೆಚ್ಚಿಬೀಳುವಂತೆ ಮಾಡಿದೆ. 

Recent Comments

Leave Comments

footer
Top