• 17 December 2018 19:54
Jai Kannada
Jai Kannada
Blog single photo
January 18, 2018

ಬೈಕ್ ಮತ್ತು ಶಾಲಾ ವಾಹನ ನಡುವೆ ಡಿಕ್ಕಿ: ಮೂವರ ಸಾವು

 ಚಿಕ್ಕೋಡಿ: ಬೈಕ್ ಮತ್ತು ಖಾಸಗಿ ಶಾಲಾ ವಾಹನ ನಡುವೆ ಡಿಕ್ಕಿಯಾಗಿ ಗುರುವಾರ ಮೂವರು ಮೃತಪಟ್ಟಿದ್ದಾರೆ.

ಬೈಕ್‌ನಲ್ಲಿದ್ದ ಮೂವರ ಪೈಕಿ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಮತ್ತೊಬ್ಬ ಬೈಕ್‌  ಸವಾರ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ.

ಮೂವರೂ ಬೈಕ್ ಸವಾರರು ಅಥಣಿ ತಾಲ್ಲೂಕಿನ ಯಲಹಡಗಿ ಗ್ರಾಮದ ನಿವಾಸಿಗಳು. ಶಾಲಾ ವಾಹನದಲ್ಲಿದ್ದ 15 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದು ಅವರನ್ನು ಅಥಣಿ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಖೋತನಹಟ್ಟಿ ಖೋತನಹಟ್ಟಿ ಕ್ರಾಸ್ ಜೇವರ್ಗಿ-ಸಂಕೇಶ್ವರ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ಗಾಯಗೊಂಡ ವಿದ್ಯಾರ್ಥಿಗಳು ಐಗಣಿ ಕ್ರಾಸ್ ಮಾಣಿಕ ಪ್ರಭು ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು. 

Recent Comments

Leave Comments

footer
Top