• 09 April 2020 21:19
Jai Kannada
Jai Kannada
Blog single photo
March 23, 2020

ಲಾಕ್ ಡೌನ್ ಕಟ್ಟುನಿಟ್ಟಾಗಿ ಪಾಲಿಸುವಂತೆ ಪ್ರಧಾನಿ ಮೋದಿ ರಾಜ್ಯಗಳಿಗೆ ಆದೇಶ 

ನವದೆಹಲಿ: ಕೊರೊನಾ ವೈರಸ್ ಸೋಂಕಿನ ಪ್ರಮಾಣ ದೇಶದಲ್ಲಿ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಆದರೆ ಪರಿಸ್ಥಿತಿಯ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳದ ಕೆಲವು ಜನರು ಲಾಕ್‌ಡೌನ್ ಉಲ್ಲಂಘಿಸಿ ರಸ್ತೆಯಲ್ಲಿ ಗುಂಪು, ಗುಂಪಾಗಿ ಸೇರುತ್ತಿರುವುದನ್ನು ಕಂಡು ಕೇಂದ್ರಸರ್ಕಾರ ರಾಜ್ಯಗಳಿಗೆ ಲಾಕ್‌ಡೌನ್ ಕ್ರಮವನ್ನು ಕಟ್ಟುನಿಟ್ಟಾಗಿ ನಿಭಾಯಿಸಿ ಎಂದು ಸೂಚನೆ ನೀಡಿದೆ.

ಲಾಕ್ ಡೌನ್ ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಿ ಎಂದು ಸರ್ಕಾರ ಆದೇಶಿಸಿದೆ.  ದೇಶದಲ್ಲಿ 400ಕ್ಕೂ ಹೆಚ್ಚು ಜನರನ್ನು ಸೋಂಕಿತರನ್ನಾಗಿ ಮಾಡಿರುವ ಕೊರೊನಾ ವೈರಸ್ ಹಾವಳಿ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇದೇ ಪರಿಸ್ಥಿತಿ ಮುಂದುವರಿಗೆ 3ನೇ ಹಂತಕ್ಕೆ ತಲುಪಿದರೆ ದೇಶದ ಜನರು ಭಾರೀ ಬೆಲೆ ತೆರಬೇಕಾಗುತ್ತದೆ.  ಇದಕ್ಕಾಗಿಯೇ ಪ್ರಧಾನಿ ಮೋದಿ ಲಾಕ್‌ಡೌನ್ ಕ್ರಮವನ್ನು ಗಂಭೀರವಾಗಿ ತೆಗೆದುಕೊಳ್ಳಿ ಎಂದು ಜನತೆಗೆ ಎಚ್ಚರಿಸಿದ್ದಾರೆ. ಜನರು ಲಾಕ್ ಡೌನ್ ಸರಿಯಾಗಿ ಪಾಲಿಸುತ್ತಿರುವುದನ್ನು ಖಾತರಿಪಡಿಸಿಕೊಳ್ಳಿ ಎಂದೂ ರಾಜ್ಯಗಳಿಗೆ ಪ್ರಧಾನಿ ಸೂಚಿಸಿದ್ದಾರೆ. ನಿಮ್ಮನ್ನು, ನಿಮ್ಮ ಕುಟುಂಬವನ್ನು ಉಳಿಸಿಕೊಳ್ಳಿ, ಲಾಕ್ ಡೌನ್ ನಿರ್ದೇಶನವನ್ನು ಸರಿಯಾಗಿ ಪಾಲಿಸಿ, ನಿಯಮಗಳು ಮತ್ತು ಕಾನೂನುಗಳ ಪಾಲನೆಯನ್ನು ಖಾತರಿಪಡಿಸಿಕೊಳ್ಳುವಂತೆ ಅವರು ರಾಜ್ಯಸರ್ಕಾರಗಳಿಗೆ ಸೂಚಿಸಿದರು. 

ಭಾರತದಾದ್ಯಂತ ದೆಹಲಿ, ಮುಂಬೈ, ಚೆನ್ನೈ, ಕೊಲ್ಕತಾ ಮತ್ತು ಬೆಂಗಳೂರು ಸೇರಿದಂತೆ 80 ಜಿಲ್ಲೆಗಳಲ್ಲಿ ಸಂಪೂರ್ಣ ಲಾಕ್ ಡೌನ್ ಘೋಷಿಸಲಾಗಿದ್ದು, ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ರೈಲ್ವೆ, ಮೆಟ್ರೋ, ಅಂತರರಾಜ್ಯ ಬಸ್ ಸಾರಿಗೆಯನ್ನು ನಿಲ್ಲಿಸಲಾಗಿದೆ ಮತ್ತು ಮಹಾರಾಷ್ಟ್ರ, ಪಂಜಾಬ್, ರಾಜಸ್ಥಾನ, ಬಂಗಾಳ ಮತ್ತು ಹರ್ಯಾಣದಲ್ಲಿ ಸಾರ್ವಜನಿಕ ಸಾರಿಗೆಯನ್ನು ನಿಷೇಧಿಸಲಾಗಿದೆ. ಹಾಲು, ಆಹಾರಪದಾರ್ಥ ಮತ್ತು ಔಷಧಿಗಳನ್ನು ಹೊರತುಪಡಿಸಿ ಎಲ್ಲ ಅಂಗಡಿಗಳು, ಕಚೇರಿಗಳು, ಮಾಲ್, ಸಿನೆಮಾ ಮಂದಿರಗಳು ಮುಚ್ಚಲಿವೆ. 

ಅನೇಕ ರಾಜ್ಯಗಳು 144ನೇ ಸೆಕ್ಷನ್ ಜಾರಿಮಾಡಿದ್ದು, ನಾಲ್ಕಕ್ಕಿಂತ ಹೆಚ್ಚು ಮಂದಿ ಒಟ್ಟಿಗೆ ಸೇರುವುದನ್ನು ನಿಷೇಧಿಸಿದೆ. ನಿಷೇಧ ಉಲ್ಲಂಘಿಸಿದರೆ ಸೆಕ್ಷನ್ 188 ಅಡಿಯಲ್ಲಿ ಒಂದು ತಿಂಗಳ ಜೈಲು ಅಥವಾ 200 ರೂ. ದಂಡ ಅಥವಾ ಎರಡನ್ನೂ ಒಟ್ಟಿಗೆ ಅನುಭವಿಸಬೇಕು.

Recent Comments

Leave Comments

footer
Top