• 19 February 2018 21:29
Jai Kannada
Jai Kannada
Blog single photo
January 18, 2018

ಪದ್ಮಾವತ್ ಚಿತ್ರಕ್ಕೆ  4 ರಾಜ್ಯಗಳ ನಿಷೇಧಕ್ಕೆ ಸುಪ್ರೀಂ ತಡೆ 

ನವದೆಹಲಿ: ವಿವಾದಾತ್ಮಕ ಪದ್ಮಾವತ್ ಚಿತ್ರವನ್ನು ನಾಲ್ಕು ರಾಜ್ಯಗಳಲ್ಲಿ ಬಿಡುಗಡೆ ಮಾಡುವುದಕ್ಕೆ ಆಯಾ ರಾಜ್ಯಗಳು ವಿಧಿಸಿದ್ದ ನಿಷೇಧಕ್ಕೆ ಸುಪ್ರೀಂಕೋರ್ಟ್ ಗುರುವಾರ ತಡೆಯಾಜ್ಞೆ ನೀಡಿದ್ದು, ಜನವರಿ 25ರಂದು ಅಖಿಲ ಭಾರತ ಬಿಡುಗಡೆಗೆ ಅವಕಾಶ ಕಲ್ಪಿಸಿದೆ.

 ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿ, ಚಿತ್ರದ ಪ್ರದರ್ಶನಕ್ಕೆ ಇತರೆ ರಾಜ್ಯಗಳು ನಿಷೇಧ ವಿಧಿಸದಂತೆ ನಿರ್ಬಂಧ ಹೇರಿದೆ. ಚಿತ್ರವನ್ನು ಕೇಂದ್ರ ಪ್ರಮಾಣೀಕರ ಮಂಡಳಿ ಯು/ಎ ಪ್ರಮಾಣಪತ್ರ ನೀಡಿ ಚಿತ್ರ ಬಿಡುಗಡೆಗೆ ಅನುಮತಿ ನೀಡಿದೆ. ಎಲ್ಲಾ ರಾಜ್ಯಗಳು ಚಲನಚಿತ್ರ ಬಿಡುಗಡೆಯ ಸಂದರ್ಭದಲ್ಲಿ ಉಂಟಾಗಬಹುದಾದ  ಅಹಿತಕಾರಿ ಘಟನೆಗಳನ್ನು ತಪ್ಪಿಸಿ ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕೆ ಬಾಧ್ಯಸ್ಥವಾಗಿವೆ ಎಂದು ಕೋರ್ಟ್ ತಿಳಿಸಿದೆ.

ಚಿತ್ರವು ನಿರ್ಮಾಪಕರ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗವಾಗಿದೆ ಎಂಬ ಅರ್ಜಿದಾರರ ವಾದವನ್ನು ಕೋರ್ಟ್ ಪುರಸ್ಕರಿಸಿತು.

Recent Comments

Leave Comments

footer
Top