ನವದೆಹಲಿ: 17 ಶಾಸಕರ ವಿರುದ್ಧ ಸ್ಪೀಕರ್ ಅನರ್ಹತೆ ಕುರಿತು ಪ್ರಶ್ನಿಸಿದ ಅರ್ಜಿಯನ್ನು ಕುರಿತು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದೆ. ಅನರ್ಹ ಶಾಸಕರನ್ನು ಸ್ಪೀಕರ್ ಅನರ್ಹಗೊಳಿಸಿದ ಕ್ರಮವನ್ನು ಎತ್ತಿಹಿಡಿದಿರುವ ಸುಪ್ರೀಂಕೋರ್ಟ್ ಅನರ್ಹ ಶಾಸಕರಿಗೆ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವ ನಿರ್ಧಾರ ಕೈಗೊಂಡಿದೆ.
ಇದರಿಂದ ರಾಜ್ಯದಲ್ಲಿ ನಿಗದಿಯಂತೆ ಡಿ.5ರಂದು ಉಪಉಪನಾವಣೆ ನಡೆಯಲಿದ್ದು, ಅನರ್ಹ ಶಾಸಕರು ಚುನಾವಣೆಯಲ್ಲಿ ಸ್ಪರ್ಧಿಸುವ ಅರ್ಹತೆ ಪಡೆದಿದ್ದಾರೆ. ಆದರೆ ಅನರ್ಹಶಾಸಕರು ಮರುಆಯ್ಕೆಯಾಗುವ ತನಕ ಮಂತ್ರಿಯಾಗುವಂತಿಲ್ಲ ಮತ್ತು ಸರ್ಕಾರದ ಯಾವುದೇ ಹುದ್ದೆ ಹೊಂದುವಂತಿಲ್ಲ ಎಂದು ಸುಪ್ರೀಂಕೋರ್ಟ್ ತಿಳಿಸಿದೆ. ಶಾಸಕರ ಅನರ್ಹತೆ ಕಾಲಾವಧಿಯನ್ನು ನಿರ್ಧರಿಸುವಂತಿಲ್ಲ ಎಂದು ತಿಳಿಸಿದ್ದು, ಸ್ಪೀಕರ್ ವಿಧಿಸಿದ್ದ ಕಾಲಮಿತಿಯನ್ನು ತಳ್ಳಿಹಾಕಿದೆ.
ಈ ನಡುವೆ ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ಪ್ರತಾಪ್ ಗೌಡ ಪಾಟೀಲ್ ಮತ್ತು ಮುನಿರತ್ನ ಇಬ್ಬರ ಕ್ಷೇತ್ರಗಳಲ್ಲೂ ಚುನಾವಣೆ ಘೋಷಣೆಯಾಗದೇ ಇರುವುದರಿಂದ ಅವರಿಬ್ಬರ ಸ್ಥಿತಿ ಅತಂತ್ರವಾಗಿದೆ. ಸ್ಪೀಕರ್ ಮಾಡಿರುವ ಆದೇಶವನ್ನು ಪರಿಶೀಲನೆ ಮಾಡಿದ್ದೇವೆ. ಸ್ಪೀಕರ್ ಸಹ ಸಂವಿಧಾನ ವಿರೋಧಿ ತೀರ್ಪು ನೀಡಬಾರದು. ವಿಧಾನಸಭೆ ಅಂತ್ಯದವರೆಗೆ ಶಾಸಕರ ಅನರ್ಹತೆ ಕ್ರಮಬದ್ಧವಲ್ಲ. ಶಾಸಕರ ಅನರ್ಹತೆಗೆ ವಿಧಿಸಿರುವ ಕಾಲಾವಧಿ ಸರಿಯಲ್ಲ ಎಂದು ನ್ಯಾ. ರಮಣ ನೇೃತ್ವದ ಸಂವಿಧಾನ ಪೀಠ ತೀರ್ಪಿನಲ್ಲಿ ತಿಳಿಸಿತು. ಅನರ್ಹ ಶಾಸಕರ ವಿರುದ್ಧವೂ ಕೋರ್ಟ್ ಗರಂ ಆಗಿದೆ. ಅನರ್ಹ ಶಾಸಕರು ಮೊದಲು ಹೈಕೋರ್ಟ್ಗೆ ಹೋಗಬೇಕಿತ್ತು. ನೇರವಾಗಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದ ಸರಿಯಲ್ಲ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
Recent Comments