• 27 February 2020 01:10
Jai Kannada
Jai Kannada
Blog single photo
September 17, 2019

ಯಡಿಯೂರಪ್ಪ ವಿರುದ್ಧ ಆಡಿಯೊ ಬಾಂಬ್ ವಿಚಾರಣೆ ಮುಂದೂಡಿಕೆ 

ಬೆಂಗಳೂರು: ಸಿಎಂ ಬಿಎಸ್‌ವೈ ವಿರುದ್ಧದ ಆಪರೇಷನ್ ಕಮಲದ ಆಡಿಯೊ ವಿಚಾರಣೆಗೆ ಸಂಬಂಧಿಸಿದಂತೆ ಕಲ್ಬುರ್ಗಿ ಹೈಕೋರ್ಟ್ ನ್ಯಾಯಪೀಠ ವಿಚಾರಣೆಯನ್ನು ಮುಂದೂಡಿದೆ. ಸಿಎಂ ಯಡಿಯೂರಪ್ಪ ವಿರುದ್ಧ  ಶರಣಗೌಡ ಕಂದಕೂರ್ ಆಪರೇಷನ್ ಕಮಲದ ಆಡಿಯೊಗೆ ಸಂಬಂಧಿಸಿದಂತೆ ದೂರು ನೀಡಿದ್ದರು. ಸೆ. 17ರಂದು ವಕೀಲರನ್ನು ಕೇಳಿ ಸೆ. 17ರ ದಿನಾಂಕ ನಿಗದಿ ಮಾಡಲಾಗಿತ್ತು

. ಆದರೆ ಕೋರ್ಟ್ ಸೆ. 23ಕ್ಕೆ ವಿಚಾರಣೆಯನ್ನು ಮುಂದೂಡಿದೆ. ಆಡಿಯೊ ಧ್ವನಿ ತಮ್ಮದೆಂದು ಸ್ವತಃ ಯಡಿಯೂರಪ್ಪ ಒಪ್ಪಿಕೊಂಡಿದ್ದರು.  ಗುರುಮಿಠ್ಕಲ್ ಜೆಡಿಎಸ್ ಶಾಸಕ ನಾಗನಗೌಡ ಅವರ ಪುತ್ರ ಶರಣಗೌಡ ಜತೆ ಯಡಿಯೂರಪ್ಪ ಮಾತನಾಡಿರುವ ಆಡಿಯೊ ತುಣುಕನ್ನು ಕುಮಾರಸ್ವಾಮಿ ಬಿಡುಗಡೆ ಮಾಡಿದ್ದರು.

ಆ ವಿಡಿಯೊದಲ್ಲಿ ಯಡಿಯೂರಪ್ಪ ಶರಣಗೌಡ ಅವರಿಗೆ ಹಣದ ಆಮಿಷ ಮತ್ತು ಟಿಕೆಟ್ ನೀಡುವ ಆಮಿಷ ಒಡ್ಡಿದ್ದಾರೆಂಬ ಆರೋಪ ಕೇಳಿಬಂದಿತ್ತು. ಮೊದಲಿಗೆ ಆಡಿಯೊ ಧ್ವನಿ ತಮ್ಮದಲ್ಲವೆಂದು ಹೇಳಿದ್ದ ಯಡಿಯೂರಪ್ಪ ಬಳಿಕ ತಮ್ಮ ಧ್ವನಿಯೇ ಎಂದು ಹೇಳಿದ್ದರು. 

Recent Comments

Leave Comments

footer
Top