• 20 October 2019 19:20
Jai Kannada
Jai Kannada
Blog single photo
September 17, 2019

ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ: ಮ್ಯಾನೇಜರ್ ವಿರುದ್ಧ ಟೆಕ್ಕಿ ಆರೋಪ 

 ಬೆಂಗಳೂರು: 28 ವರ್ಷ ವಯಸ್ಸಿನ ಸಾಫ್ಟ್‌ವೇರ್ ಎಂಜಿನಿಯರ್ ತಮ್ಮ ಕಂಪನಿಯ ಮ್ಯಾನೇಜರ್ ವಿರುದ್ಧ ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳದ ದೂರನ್ನು ಮಾರತ್ ಹಳ್ಳಿ ಪೊಲೀಸ್ ಠಾಣೆಯಲ್ಲಿ ನೀಡಿದ್ದಾರೆ. ಅವರ ದೂರಿನಲ್ಲಿ, 48 ವರ್ಷ ವಯಸ್ಸಿನ ಮ್ಯಾನೇಜರ್ ಅಮೆರಿಕದ ಬಹುರಾಷ್ಟ್ರೀಯ ಫೈನಾನ್ಸಿಯಲ್ ಸರ್ವೀಸಸ್ ಕಂಪನಿಯಲ್ಲಿ ಉದ್ಯೋಗದ ಆಫರ್ ತಮಗೆ ನೀಡಿದರೆಂದು ಮಹಿಳೆ ತಿಳಿಸಿದ್ದಾರೆ.

ಆನ್‌ಲೈನ್ ಉದ್ಯೋಗದ ಪೋರ್ಟಲ್‌ನಲ್ಲಿ ತಮ್ಮ ವಿವರ ಪರಿಶೀಲಿಸಿದ ಅವರು ಉತ್ತಮ ವೇತನ ಮತ್ತು ಸ್ಥಾನ ಮಾಡಿದ ನೀಡಿದ್ದರಿಂದ ಆ ಕೆಲಸವನ್ನು ಒಪ್ಪಿಕೊಂಡಿದ್ದಾಗಿ ಮಹಿಳೆ ತಿಳಿಸಿದ್ದಾರೆ. ತಾವು ಉದ್ಯೋಗವನ್ನು ಸ್ವೀಕರಿಸಿದ ಮೇಲೆ ಅವರ ಲೈಂಗಿಕ ಕಿರುಕುಳ ಆರಂಭವಾಗಿತ್ತು. ರಾತ್ರಿ ಕೂಡ ಕರೆ ಮಾಡಿ ಅಶ್ಲೀಲ ಸಂದೇಶ ಕಳಿಸುತ್ತಿದ್ದರು.

ನನ್ನನ್ನು ಮದುವೆಯಾಗುವುದಾಗಿ ಹೇಳಿ ಲೈಂಗಿಕ ಅಪೇಕ್ಷೆ ವ್ಯಕ್ತಪಡಿಸಿದ್ದರು ಎಂದು ಟೆಕ್ಕಿ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಮ್ಯಾನೇಜರ್ ಟೆಕ್ಕಿಯನ್ನು ರೆಸ್ಟೊರೆಂಟ್ ಒಂದಕ್ಕೆ ಕರೆದುಕೊಂಡು ಹೋಗಿ ಅಸಭ್ಯವಾಗಿ ಯುವತಿ ಜತೆ ವರ್ತಿಸಿದ್ದರು. ಮಹಿಳೆಯ ಶೀಲ ಕೆಣಕಿದ ಆರೋಪವನ್ನು ಅವರ ವಿರುದ್ಧ ಹೊರಿಸಲಾಗಿದೆ. ಮ್ಯಾನೇಜರ್ ತಲೆತಪ್ಪಿಸಿಕೊಂಡಿದ್ದು, ಪೊಲೀಸರು ಶೋಧ ನಡೆಸಿದ್ದಾರೆ. 

Recent Comments

Leave Comments

footer
Top