• 09 December 2019 02:25
Jai Kannada
Jai Kannada
Blog single photo
September 12, 2019

 ಸರ್ಕಾರ ಇಚ್ಛಿಸುವುದಾದರೆ ಪಿಒಕೆ ವಶಕ್ಕೆ ಕಾರ್ಯಾಚರಣೆಗೆ ಸಿದ್ಧ: ಬಿಪಿನ್ ರಾವತ್ 

ನವದೆಹಲಿ: ಜಮ್ಮುಕಾಶ್ಮೀರದಲ್ಲಿ 370ನೇ ವಿಧಿ ರದ್ದುಮಾಡಿರುವ ಬಗ್ಗೆ ಪಾಕಿಸ್ತಾನ ಬೊಬ್ಬೆ ಹಾಕುತ್ತಿರುವ ನಡುವೆಯೇ ಸರ್ಕಾರ ಇಚ್ಛೆಪಡುವುದಾದರೆ ಪಿಒಕೆಯನ್ನು ಪಾಕಿಸ್ತಾನದ ಹಿಡಿತದಿಂದ ತಪ್ಪಿಸಿ ಹಿಂಪಡೆದುಕೊಳ್ಳಲು ಕಾರ್ಯಾಚರಣೆ ನಡೆಸುವುದಕ್ಕೆ ಸೇನೆ ಸಿದ್ದವಿದೆ ಎಂದು ಭಾರತದ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಗುರುವಾರ ತಿಳಿಸಿದ್ದಾರೆ.

 ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಸರ್ಕಾರದ ಮುಂದಿನ ಕಾರ್ಯಸೂಚಿ ಪಿಒಕೆಯನ್ನು ಹಿಂಪಡೆದು ಭಾರತದ ಅಂಗವಾಗಿಸುವುದು ಎಂದು ನೀಡಿದ ಹೇಳಿಕೆಗೆ ಬಿಪಿನ್ ರಾವತ್ ಪ್ರತಿಕ್ರಿಯಿಸುತ್ತಿದ್ದರು.  ಎಲ್ಲಾ ಕಾರ್ಯಾಚರಣೆಗಳು ಕೇಂದ್ರ ಸರ್ಕಾರದ ನಿರ್ಧಾರವನ್ನು ಅವಲಂಬಿಸಿದೆ. ಸೇನೆ ಯಾವುದೇ ರೀತಿಯ ಕಾರ್ಯಾಚರಣೆಗೆ ಸಿದ್ಧವಾಗಿದೆ.

ಸರ್ಕಾರದ ನಿರ್ದೇಶನಕ್ಕೆ ಅನುಗುಣವಾಗಿ ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ರಾವತ್ ಮಾಧ್ಯಮಕ್ಕೆ ತಿಳಿಸಿದರು. ಇದು ನನ್ನ ಅಥವಾ ನನ್ನ ಪಕ್ಷದ ಬದ್ಧತೆಯಲ್ಲ. 1994ರಲ್ಲಿ ಪಿ.ವಿ. ನರಸಿಂಹ ರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಸರ್ವಾನುಮತದಿಂದ ಈ ನಿರ್ಣಯವನ್ನು ಅಂಗೀಕರಿಸಿತ್ತು ಎಂದು ಸಿಂಗ್ ಜಮ್ಮುವಿನಲ್ಲಿ ತಿಳಿಸಿದರು. 

Recent Comments

Leave Comments

footer
Top