• 27 February 2020 00:33
Jai Kannada
Jai Kannada
Blog single photo
September 12, 2019

ಡಿಕೆಶಿ ಜತೆ ಅವರ ಪುತ್ರಿ ಐಶ್ವರ್ಯಗೆ ಕೂಡ ಇಡಿ ವಿಚಾರಣೆ

 ನವದೆಹಲಿ: ಕರ್ನಾಟಕದ ಮಾಜಿ ಸಚಿವ ಮತ್ತು ಕಾಂಗ್ರೆಸ್ ಹಿರಿಯ ಮುಖಂಡ ಡಿ.ಕೆ.ಶಿವಕುಮಾರ್ ಅವರಿಗೆ ಇಡಿ ಕಂಟಕ ಎದುರಾಗಿರುವ ನಡುವೆ, ಅವರ ಪುತ್ರಿ ಐಶ್ವರ್ಯ ಕೂಡ ಹಣ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಇಡಿ ಎದುರು ಹಾಜರಾಗಿದ್ದಾರೆ. ಮಂಗಳವಾರ ಹಾಜರಾಗುವಂತೆ ಇಡಿ ಐಶ್ವರ್ಯಗೆ ಸಮನ್ಸ್ ನೀಡಿತ್ತು. ಐಶ್ವರ್ಯ ಬೆಳಿಗ್ಗೆ 10.40ಕ್ಕೆ ಇಡಿ ಎದುರು ಹಾಜರಾಗಿ ಹೇಳಿಕೆ ನೀಡಿದರು. ಇಡಿ ಕಚೇರಿಯೊಳಕ್ಕೆ ಹೋಗುವಾಗ ಮಾಧ್ಯಮದ ಜತೆ ಮಾತನಾಡುವುದಕ್ಕೆ ಅವರಿಗೆ ಅವಕಾಶ ನೀಡಿರಲಿಲ್ಲ.

ಐಶ್ವರ್ಯ ನಿರ್ವಹಿಸುತ್ತಿರುವ ಟ್ರಸ್ಟ್ ಹಣಕಾಸು ವ್ಯವಹಾರಗಳ ಬಗ್ಗೆ ಅವರನ್ನು ಇಡಿ ಪ್ರಶ್ನಿಸುತ್ತಿದೆ. ಟ್ರಸ್ಟ್ ಹಣಕಾಸು ವಹಿವಾಟಿಗೆ ಸಂಬಂಧಿಸಿದ ದಾಖಲೆಗಳನ್ನು ಇಡಿ ಪರಿಶೀಲನೆ ನಡೆಸುತ್ತಿದೆ. ಐಶ್ವರ್ಯ ಕಾಫಿ ಡೇ ಮತ್ತು ಸೌಲ್ ಸ್ಪೇಸ್ ಜತೆ ಸಿಂಗಪುರದಲ್ಲಿ ಏರ್ಪಟ್ಟ 2017ನೇ ವಾಣಿಜ್ಯ ಒಪ್ಪಂದದ ಭಾಗವಾಗಿದ್ದರು.

2018ನೇ ಚುನಾವಣೆ ಪ್ರಮಾಣಪತ್ರದಲ್ಲಿ, ಡಿ.ಕೆ. ಶಿವಕುಮಾರ್ 618 ಕೋಟಿ ರೂ. ಆಸ್ತಿಯನ್ನು ತಮ್ಮ ಹೆಸರಿನಲ್ಲಿ ಮತ್ತು 108 ಕೋಟಿ ರೂ. ಆಸ್ತಿ ತಮ್ಮ ಪುತ್ರಿಯ ಹೆಸರಿನಲ್ಲಿದೆಯೆಂದು ಘೋಷಿಸಿಕೊಂಡಿದ್ದರು. ಡಿ.ಕೆ. ಶಿವಕುಮಾರ್ ಅವರ ನವದೆಹಲಿಯ ಫ್ಲಾಟ್‌ನಲ್ಲಿ ಐಟಿ ಇಲಾಖೆ ನಡೆಸಿದ್ದ ಶೋಧದಲ್ಲಿ  8.59 ಕೋಟಿ ರೂ. ಭಾರೀ ಮೊತ್ತ ಪತ್ತೆಯಾಗಿತ್ತು. ಅದಾದ ಬಳಿಕ ಐಟಿ ಇಲಾಖೆ ಡಿಕೆಶಿ ಮತ್ತು ಅವರ ನಾಲ್ವರು ಸಹಚರರ ವಿರುದ್ಧ ಕೇಸ್ ದಾಖಲಿಸಿತ್ತು.

Recent Comments

Leave Comments

footer
Top