• 20 October 2019 20:08
Jai Kannada
Jai Kannada
Blog single photo
September 11, 2019

ತಾಂಜಾನಿಯ ರಸ್ತೆ ಅಪಘಾತದಲ್ಲಿ ಉಡುಪಿ ಉದ್ಯಮಿ ಸಾವು 

ಉಡುಪಿ: ಇಲ್ಲಿನ ಪನಿಯಾಡಿಯ ಉದ್ಯಮಿ ಶ್ರವಣ್ ನಾಯಕ್(39) ತಾಂಜಾನಿಯಾದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ತೀವ್ರ ಗಾಯಗಳಿಂದ ಕೊನೆಯುಸಿರೆಳೆದಿದ್ದಾರೆ. ಟ್ರಕ್ಕೊಂದು ಕಾರಿಗೆ ಡಿಕ್ಕಿಹೊಡೆದಿದ್ದರಿಂದ ಕಾರಿನಲ್ಲಿದ್ದ ಶ್ರವಣ್ ಆಗಸ್ಟ್ 30ರಂದು ತೀವ್ರವಾಗಿ ಗಾಯಗೊಂಡಿದ್ದರು. ಸಮೀಪದ ಆಸ್ಪತ್ರೆಗೆ ಅವರನ್ನು ತಕ್ಷಣವೇ ಸೇರಿಸಲಾಗಿತ್ತು.

ಹೆಚ್ಚುವರಿ ಚಿಕಿತ್ಸೆಗಾಗಿ ಅವರನ್ನು ಸೆ. 7ರಂದು ತಾಂಜಾನಿಯಾದಿಂದ ಇಲ್ಲಿಗೆ ಕರೆತಂದು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಸೆ. 10ರಂದು ಅವರು ಸೋಮವಾರ ಅವರು ನಿಧನರಾಗಿದ್ದಾರೆ. 

Recent Comments

Leave Comments

footer
Top