ಮಂಗಳೂರು: ಯುವಕನೊಬ್ಬ ತನ್ನ ಅಜ್ಜಿಯ ಮನೆಯಲ್ಲಿ ಆತ್ಮಹತ್ಯೆಗೆ ಶರಣಾದ ಘಟನೆ ಭಾನುವಾರ ಸಂಭವಿಸಿದ್ದು, ಮಂಗಳವಾರ ರಾತ್ರಿ ಈ ವಿಚಾರ ಬೆಳಕಿಗೆ ಬಂದಿದೆ. ಮೃತನನ್ನು ಅರುಣ್ ರಾಜ್(31) ಎಂದು ಗುರುತಿಸಲಾಗಿದ್ದು, ಮೂಡಬಿದ್ರಿಯ ನಿವಾಸಿ. ನಿವೃತ್ತ ಅರಣ್ಯಾಧಿಕಾರಿ ಪೂವಪ್ಪ ಅವರ ಪುತ್ರರು. ಆತ್ಮಹತ್ಯೆಗೆ ಕಾರಣ ಇನ್ನೂ ಖಚಿತಪಟ್ಟಿಲ್ಲ.
ಅರುಣ್ ರಾಜ್ ಅವರು ಭಾನುವಾರ ಕೊನೆಯ ಬಾರಿ ಕಂಡುಬಂದಿದ್ದರು. ಪಾಂಡೇಶ್ವರದಲ್ಲಿರುವ ತನ್ನ ಅಜ್ಜಿಯ ಮನೆಯಲ್ಲಿ ಅರುಣ್ ರಾಜ್ ಈ ರೀತಿಯ ಅತಿರೇಕದ ಕ್ರಮಕ್ಕೆ ಮುಂದಾಗಿದ್ದಾನೆ. ಮನೆಯಲ್ಲಿ ಯಾರೂ ಇಲ್ಲದಾಗ ಅವನು ಆತ್ಮಹತ್ಯೆ ಮಾಡಿಕೊಂಡನೆಂದು ಶಂಕಿಸಲಾಗಿದೆ. ಮನೆಯಿಂದ ಕೊಳೆತ ವಾಸನೆ ಬರಲಾರಂಭಿಸಿದಾಗ, ಸುತ್ತಮುತ್ತಲಿನ ಜನರು ಮನೆಯ ಕಿಟಕಿಯಿಂದ ನೋಡಿದಾಗ ಅರುಣ್ ರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದು ಗೊತ್ತಾಗಿದೆ.
Recent Comments