• 09 December 2019 02:24
Jai Kannada
Jai Kannada
Blog single photo
September 10, 2019

ಕುಂಟೆಯ ನೀರಿನಾಳ ತಿಳಿಯದೇ ಮುಳುಗಿದ 6 ಮಕ್ಕಳ ದುರಂತ ಸಾವು 

ಕೋಲಾರ: ಒಂದು ಕಾಲದಲ್ಲಿ ಚಿನ್ನದ ಗಣಿಗೆ ಹೆಸರಾಗಿದ್ದ ಕೆಜಿಎಫ್‌ನಲ್ಲಿ ತಂದೆ, ತಾಯಿಗಳ ಪಾಲಿಗೆ ಚಿನ್ನದಂತಿರುವ 6 ಮಕ್ಕಳು ನೀರಿನ ಕುಂಟೆಯಲ್ಲಿ ಮುಳುಗಿ ದಾರುಣವಾಗಿ ಸತ್ತಿರುವ ಘಟನೆ ಸಂಭವಿಸಿದೆ. ಗ್ರಾಮದ 8 ಮಕ್ಕಳು ಜೇಡಿ ಮಣ್ಣಿನಲ್ಲಿ ಗಣೇಶ ಮುೂರ್ತಿಯನ್ನು ತಯಾರಿಸಿ ಅದನ್ನು ನೀರಿನ ಕುಂಟೆಯಲ್ಲಿ ವಿಸರ್ಜನೆ ಮಾಡಲು ತೆರಳಿದ್ದರು.

8 ಮಕ್ಕಳ ಪೈಕಿ ಇಬ್ಬರು ಚಿಕ್ಕ ಮಕ್ಕಳು ದಂಡೆಯಲ್ಲಿ ನಿಂತಿದ್ದರೆ, ಉಳಿದ ಮಕ್ಕಳು ಗಣೇಶ ವಿಸರ್ಜನೆಗೆ ನೀರಿಗೆ ಇಳಿದರು. ಆದರೆ ಕುಂಟೆಯ ಆಳ ಗೊತ್ತಾಗದೇ 6 ಮಕ್ಕಳೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಕುಂಟೆಯಲ್ಲಿ ಇತ್ತೀಚೆಗೆ ಜೆಸಿಬಿಯಿಂದ ಮಣ್ಣು ತೆಗೆದಿದ್ದರಿಂದ ಕುಂಟೆಯ ಆಳ ಹೆಚ್ಚಿ ಮಳೆ ನೀರು ತುಂಬಿತ್ತು. ಕುಂಟೆ ಸುಮಾರು 8 ಅಡಿ ಆಳವಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಕುಂಟೆಯ ಆಳ ತಿಳಿಯದೇ 6 ಮಕ್ಕಳೂ ಒಂದೇ ಬಾರಿಗೆ ನೀರಿಗೆ ಇಳಿದಿದ್ದರಿಂದ ನೀರಿನಲ್ಲಿ ಮುಳುಗಿ ಸತ್ತಿದ್ದಾರೆ. 

Recent Comments

Leave Comments

footer
Top