• 23 January 2020 23:31
Jai Kannada
Jai Kannada
Blog single photo
September 10, 2019

ಪೊಲೀಸರ ಜತೆ ವಾಗ್ವಾದಕ್ಕಿಳಿದ ಟೆಕ್ಕಿ ಹೃದಯಾಘಾತದಿಂದ ಸಾವು 

ನೋಯ್ಡ: ಟ್ರಾಫಿಕ್ ಉಲ್ಲಂಘನೆಗೆ ವಿಧಿಸುವ ದಂಡದ ದುಬಾರಿ ದರ ಕಂಡು ವಾಹನ ಸವಾರರು ಬೆಚ್ಚಿಬಿದ್ದಿದ್ದು, ಆದಷ್ಟು ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಆದರೆ ಟ್ರಾಫಿಕ್ ಪೊಲೀಸರಿಂದ ಸಂಚಾರ ನಿಯಮ ಉಲ್ಲಂಘನೆಯ  ದುಬಾರಿ ದರ ಏರಿಕೆಯಿಂದಲೋ ಅಥವಾ ಬೇರಾವುದೋ ಕಾರಣದಿಂದ ಅವರ ಜತೆ ವಾಗ್ವಾದದಲ್ಲಿ ತೊಡಗಿದ್ದ ವ್ಯಕ್ತಿಯೊಬ್ಬರು ಹೃದಯಾಘಾತಕ್ಕೊಳಗಾಗಿ ಮೃತಪಟ್ಟ ದುರಂತ ಸಂಭವಿಸಿದೆ. ದೆಹಲಿ ಸಮೀಪದ ಗಜಿಯಾಬಾದ್‌ನಲ್ಲಿ ಈ ಘಟನೆ ನಡೆದಿದೆ.

ಟ್ರಾಫಿಕ್ ಪೊಲೀಸರ ಜತೆ ವಾಗ್ವಾದದಲ್ಲಿ ತೊಡಗಿದ್ದರಿಂದ ತಮ್ಮ ಪುತ್ರ ಉದ್ವೇಗಕ್ಕೊಳಗಾಗಿ ಹೃದಯಾಘಾತಕ್ಕೀಡಾಗಿದ್ದಾನೆ ಎಂದು ಮೃತನ ತಂದೆ, ತಾಯಿ ಆರೋಪಿಸಿದ್ದಾರೆ. ಮೃತವ್ಯಕ್ತಿ ಸಾಫ್ಟ್ ವೇರ್ ಉದ್ಯೋಗಿಯಾಗಿದ್ದು, ಅವರಿಗೆ ಮಧುಮೇಹವಿತ್ತು. ಗಜಿಯಾಬಾದ್ ತಿರುವಿನಲ್ಲಿ ಪೊಲೀಸರು ತಡೆದು ಮೋಟಾರು ವಾಹನ ಕಾಯ್ದೆಯ ಕಟ್ಟುನಿಟ್ಟಿನ ಪಾಲನೆ ನೆಪದಲ್ಲಿ ತಮ್ಮ ಪುತ್ರನ ಜತೆ ಒರಟಾಗಿ ನಡೆದುಕೊಂಡಿದ್ದರು. ಕಾರಿನಲ್ಲಿ ವೃದ್ಧರಿರುವುದನ್ನೂ ಲೆಕ್ಕಿಸದೇ ಕಾರಿಗೆ ಪೊಲೀಸರು ಬೆತ್ತದಿಂದ ಬಡಿದಿದ್ದರು.

ಇದರಿಂದ ತೀವ್ರ ನೊಂದಿದ್ದ ತಮ್ಮ ಪುತ್ರ ಹೃದಯಾಘಾತಕ್ಕೆ ಗುರಿಯಾಗಿದ್ದಾನೆ ಎಂದು ಅವರ ತಂದೆ, ತಾಯಿ ದೂರಿದ್ದಾರೆ. ನನ್ನ ಮೊಮ್ಮಗಳು ತಂದೆಯನ್ನು ಕಳೆದುಕೊಂಡಿದ್ದಾಳೆ. ಐದು ವರ್ಷ ವಯಸ್ಸಿನ ಅವಳನ್ನು ನೋಡಿಕೊಳ್ಳುವವರು ಯಾರು ಎಂದು ಪ್ರಶ್ನಿಸಿದ್ದಾರೆ. ಪ್ರಧಾನಿ ಮೋದಿ ಅವರು ನನಗೆ ನ್ಯಾಯ ಒದಗಿಸಿಕೊಡಬೇಕು ಎಂದು ಅವರು ಕೇಳಿದ್ದಾರೆ.

Recent Comments

Leave Comments

footer
Top