• 20 October 2019 19:19
Jai Kannada
Jai Kannada
Blog single photo
September 07, 2019

ಇನ್ನೂ ಇಬ್ಬರು ಉಪಮುಖ್ಯಮಂತ್ರಿಗಳ ನೇಮಕಕ್ಕೆ ಹೈಕಮಾಂಡ್ ಆದೇಶ?

 ಬೆಂಗಳೂರು: ಸರ್ಕಾರದಲ್ಲಿ ಯಡಿಯೂರಪ್ಪನವರ ಸಂಪೂರ್ಣ ಹಿಡಿತವನ್ನು ತಪ್ಪಿಸಲು ಕೇಂದ್ರಸರ್ಕಾರ ಈಗಾಗಲೇ ಮೂವರು ಉಪಮುಖ್ಯಮಂತ್ರಿಗಳನ್ನು ನೇಮಕ ಮಾಡುವಂತೆ ಆದೇಶಿಸಿ ಈಗಾಗಲೇ ಅಚ್ಚರಿಗೊಳಿಸಿದೆ. ಆದರೆ ಇಷ್ಟಕ್ಕೆ ಸುಮ್ಮನಾಗದ ಹೈಕಮಾಂಡ್ ಇನ್ನೂ ಇಬ್ಬರು ಉಪಮುಖ್ಯಮಂತ್ರಿಗಳನ್ನು ಸಂಪುಟಕ್ಕೆ ಸೇರ್ಪಡೆ ಮಾಡುವಂತೆ ಯಡಿಯೂರಪ್ಪಗೆ ಆದೇಶ ನೀಡಿದೆಯೆಂದು ಗೊತ್ತಾಗಿದೆ. 
 ಡಿಸಿಎಂ ಹುದ್ದೆಗಳನ್ನು ಐದು ಪ್ರಬಲ ಕೋಮುಗಳಿಗೆ ನೀಡಲು ಹೈಕಮಾಂಡ್ ನಿರ್ಧರಿಸಿದೆ.

ಈಗಾಗಲೇ ಅಧಿಕಾರ ವಹಿಸಿಕೊಂಡಿರುವ ಮೂವರು ಡಿಸಿಎಂಗಳ ಪೈಕಿ ಗೋವಿಂದ ಕಾರಜೋಳ ಪರಿಶಿಷ್ಟ ಜಾತಿಗೆ ಸೇರಿದವರು. ಲಕ್ಷ್ಮಣ ಸವದಿ ಲಿಂಗಾಯತ, ಮತ್ತು ಅಶ್ವಥ್ ನಾರಾಯಣ್ ಒಕ್ಕಲಿಗರು. ಇನ್ನಿಬ್ಬರು ಡಿಸಿಎಂಗಳ ಪೈಕಿ ಒಬ್ಬರು ಬಹುಶಃ ಪರಿಶಿಷ್ಟ ಪಂಗಡ ಮತ್ತು ಇನ್ನೊಬ್ಬರು ಕುರುಬ ಸಮುದಾಯಕ್ಕೆ ಸೇರಿರಬಹುದೆಂದು ಹೇಳಲಾಗುತ್ತಿದೆ. 

ಆಂತರಿಕ ಮೂಲಗಳ ಪ್ರಕಾರ, ಯಡಿಯೂರಪ್ಪ ಎಲ್ಲಾ ಸಮುದಾಯದ ಜನರನ್ನು ಸಂತೋಷವಾಗಿಡಲು ಈ ಕ್ರಮಕ್ಕೆ ಮುಂದಾಗಿದ್ದಾರೆ. ಬಿಜೆಪಿ ಹೈಕಮಾಂಡ್ ಕೂಡ ಐವರು ಡಿಸಿಎಂಗಳ ಪೈಕಿ ಯಡಿಯೂರಪ್ಪನವರ ಸೂಕ್ತ ಉತ್ತರಾಧಿಕಾರಿಯನ್ನು ಹುಡುಕಲು ಯತ್ನಿಸುತ್ತಿರಬಹುದೆಂದು ಗೊತ್ತಾಗಿದೆ. ಸುಪ್ರೀಂಕೋರ್ಟ್ 17 ಅನರ್ಹ ಶಾಸಕರ ಅರ್ಜಿಗಳನ್ನು ಕುರಿತು ತೀರ್ಪು ನೀಡುವ ತನಕ ಇನ್ನಿಬ್ಬರು ನೂತನ ಉಪಮುಖ್ಯಮಂತ್ರಿಗಳನ್ನು ನೇಮಿಸುವ ಸಾಧ್ಯತೆಯಿಲ್ಲ.

ಅನರ್ಹತೆ ರದ್ದಾದರೆ, ರಮೇಶ್ ಜಾರಕಿಹೊಳಿ 
ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಗಟ್ಟಿಯಾಗುತ್ತದೆ. ಕಾಂಗ್ರೆಸ್-ಜೆಡಿಎಸ್ ಸರ್ಕಾರದ ಪತನದಲ್ಲಿ ಅವರು ಪ್ರಧಾನ ಪಾತ್ರವಹಿಸಿದ್ದರು. 

Recent Comments

Leave Comments

footer
Top