• 23 January 2020 22:19
Jai Kannada
Jai Kannada
Blog single photo
September 07, 2019

ಚಂದ್ರಯಾನ-2 ಯೋಜನೆಯ ಹಿನ್ನಡೆಯಿಂದ ವಿಜ್ಞಾನಿಗಳು ಧೃತಿಗೆಟ್ಟಿಲ್ಲ: ಪ್ರಧಾನಿ ಮೋದಿ 

ಮುಂಬೈ: ಚಂದ್ರಯಾನ-2 ಯೋಜನೆಯ ಹಿನ್ನಡೆಯಿಂದ ಇಸ್ರೊ ವಿಜ್ಞಾನಿಗಳು ಧೃತಿಗೆಟ್ಟಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಶನಿವಾರ ತಿಳಿಸಿದರು. ರಾಷ್ಟ್ರವು ಚಂದ್ರನನ್ನು ಮುಟ್ಟುವ ತನ್ನ ಗುರಿಯನ್ನು ಸಾಧಿಸುತ್ತದೆ ಎಂದು ಆತ್ಮವಿಶ್ವಾಸದಿಂದ ನುಡಿದರು.  ಚಂದ್ರಯಾನ-2 ಯೋಜನೆಯ ವಿಕ್ರಮ್ ಲ್ಯಾಂಡರ್ ಭೂ ಕೇಂದ್ರದೊಂದಿಗೆ ಸಂಪರ್ಕ ಕಡಿದುಕೊಂಡ ಕೆಲವು ಗಂಟೆಗಳ ಬಳಿಕ ಮೋದಿ ಮಾತನಾಡುತ್ತಿದ್ದರು. ಈ ಕ್ಷಣವನ್ನು ಮೋದಿ ಖುದ್ದಾಗಿ ವೀಕ್ಷಿಸುತ್ತಿದ್ದರು.

ಇಸ್ರೊ ವಿಜ್ಞಾನಿಗಳು ಗುರಿ ಸಾಧಿಸುವ ತನಕ ವಿಶ್ರಮಿಸದಿರುವ ಪ್ರಬಲ ಕಾರ್ಯಮನೋಭಾವ ಹೊಂದಿದ್ದಾರೆಂದು ಪ್ರಧಾನಿ ಶ್ಲಾಘಿಸಿದರು.  ಚಂದ್ರನನ್ನು ಮುಟ್ಟುವ ಕನಸನ್ನು ಸಾಧಿಸುತ್ತಾರೆ ಎಂದು ಮೋದಿ ಹೇಳಿದರು. ಆರ್ಬಿಟರ್ ಈಗಲೂ ಕಕ್ಷೆಯಲ್ಲಿ ಸುತ್ತುತ್ತಿದ್ದು, ಇದೊಂದು ಐತಿಹಾಸಿಕ ಸಾಧನೆ ಎಂದು ಮೋದಿ ಬಣ್ಣಿಸಿದರು.

ವಾಷಿಂಗ್ಟನ್/ಲಂಡನ್ : ಚಂದ್ರನ ದಕ್ಷಿಣ ದ್ರುವ ಪ್ರದೇಶದಲ್ಲಿ ಭಾರತದ ಐತಿಹಾಸಿಕ ಯೋಜನೆಯಾದ ರೋವರ್ ಇಳಿಸುವ ಕಾರ್ಯಾಚರಣೆ ವಿಫಲವಾಗಿರಬಹುದು. ಆದರೆ ಮಹತ್ವದ ಈ ಪ್ರಯತ್ನವು ಭಾರತದ ಎಂಜಿನಿಯರಿಂಗ್ ಪ್ರಾವೀಣ್ಯತೆ ಬಗ್ಗೆ ಮತ್ತು ಬಾಹ್ಯಾಕಾಶ ಸೂಪರ್ ಪವರ್ ಆಗುವ ಭಾರತದ ಮಹತ್ವಾಕಾಂಕ್ಷೆ ಬಗ್ಗೆ ಗಮನಸೆಳೆದಿದೆ ಎಂದು ಗ್ಲೋುೂವಲ್ ಮೀಡಿಯಾ ಪ್ರತಿಕ್ರಿಯಿಸಿದೆ.

ನ್ಯೂಯಾರ್ಕ್ ಟೈಮ್ಸ್, ದಿ ವಾಷಿಂಗ್ಟನ್ ಪೋಸ್ಟ್, ಬಿಸಿಸಿ ಮತ್ತು ಗಾರ್ಡಿಯನ್ ಮತ್ತು ಇನ್ನೂ ಅನೇಕ ವಿದೇಶಿ ಮಾಧ್ಯಮ
ಭಾರತದ ಚಂದ್ರಯಾನ-2 ಸಾಹಸದ ಬಗ್ಗೆ ಬರೆದಿವೆ. ಅಮೆರಿಕದ ನಿಯತಕಾಲಿಕೆ ವೈರ್ಡ್ ಚಂದ್ರಯಾನ-2 ಕಾರ್ಯಕ್ರಮ ಭಾರತದ ಅತ್ಯಂತ ಮಹತ್ವಾಕಾಂಕ್ಷಿ ಬಾಹ್ಯಾಕಾಶ ಯೋಜವನೆ ಎಂದು ತಿಳಿಸಿದೆ. ಚಂದ್ರನ ಮೇಲ್ಮೈಗೆ ಅದು ಒಯ್ಯುತ್ತಿದ್ದ ವಿಕ್ರಮ್ ಲ್ಯಾಂಡರ್ ಮತ್ತು ಪ್ರಜ್ಞಾನ್ ರೋವರ್ ನಷ್ಟವು ಭಾರತದ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ದೊಡ್ಡ ಪೆಟ್ಟು, ಆದರೆ ಈ ಯೋಜನೆ ಇನ್ನೂ ಜೀವ ಪಡೆದುಕೊಳ್ಳಬಹುದು ಎಂದಿದೆ.

Recent Comments

Leave Comments

footer
Top