• 18 November 2019 12:44
Jai Kannada
Jai Kannada
Blog single photo
September 04, 2019

ಸತತ ವಿಚಾರಣೆಯಿಂದ ಕುಗ್ಗಿದ ಡಿಕೆಶಿ ಆಸ್ಪತ್ರೆಯಲ್ಲಿ ಚಿಕಿತ್ಸೆ 

ನವದೆಹಲಿ: ಕನಕಪುರ ಬಂಡೆಯಂತಿದ್ದ ಡಿ.ಕೆ.ಶಿವಕುಮಾರ್ ಅವರಿಗೆ ಜಾರಿ ನಿರ್ದೇಶನಾಲಯ ಎಡಬಿಡದೇ ನಾಲ್ಕು ದಿನಗಳ ಕಾಲ ನಡೆಸಿದ ಸತತ ವಿಚಾರಣೆ ಬಳಿಕ ಬಂಧನದಿಂದ ತೀವ್ರ ಕುಗ್ಗಿಹೋಗಿದ್ದಾರೆ. ಸತತ ವಿಚಾರಣೆಯಿಂದ ಉಂಟಾದ ಉದ್ವೇಗದಿಂದ ಅವರ ರಕ್ತದೊತ್ತಡ ಏರಿಕೆಯಾಗಿ ಡಿಕೆಶಿಯನ್ನು ನವದೆಹಲಿಯ ರಾಮಮನೋಹರ ಲೋಹಿಯಾ ಆಸ್ಪತ್ರೆಗೆ ಸೇರಿಸಲಾಗಿದೆ. ಆಸ್ಪತ್ರೆಯಲ್ಲೇ ವಿಚಾರಣೆಗೆ ಅವಕಾಶ ನೀಡಬೇಕೆಂದು ಇಡಿ ಕೋರಿಕೆ ಸಲ್ಲಿಸಿದೆ.

ವಿಚಾರಣೆಗಾಗಿ 5ದಿನಗಳಿಂದ 15 ದಿನಗಳಿಂದ ಅವರನ್ನು ಕಸ್ಟಡಿಗೆ ತೆಗೆದುಕೊಳ್ಳುವ ಸಾಧ್ಯತೆಯಿದೆ. ಆಸ್ಪತ್ರೆಯಲ್ಲೇ ಡಿಕೆಶಿ ವಿಚಾರಣೆಗೆ ಅವಕಾಶ ನೀಡುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಯಾವುದಕ್ಕೂ ಅವರ ಆರೋಗ್ಯ ಚೇತರಿಸಿಕೊಂಡ ಮೇಲೆ ಮಾತ್ರ ಇಡಿ ಕಸ್ಟಡಿಗೆ ತೆಗೆದುಕೊಳ್ಳಬೇಕಾಗುತ್ತದೆ. 

ಡಿಕೆಶಿ ಬಂಧನ ವಿರೋಧಿಸಿ ರಾಜ್ಯಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ತೀವ್ರ ಪ್ರತಿಭಟನೆಗೆ ಇಳಿದಿದ್ದಾರೆ. ರಾಮನಗರದಲ್ಲಿ ಪ್ರತಿಭಟನೆ ತಾರಕ್ಕೇರಿದ ಹಿನ್ನೆಲೆಯಲ್ಲಿ ಮೈಸೂರು, ಮಂಡ್ಯ, ಮಳವಳ್ಳಿ ಮಾರ್ಗದಿಂದ ಬರುವ ಬಸ್‌ಗಳ ಮಾರ್ಗ ಬದಲಿಸಲಾಗಿದೆ. ಕನಕಪುರದಲ್ಲಿ ಪ್ರತಿಭಟನೆಕಾರರು ಬಸ್ಸೊಂದಕ್ಕೆ ಬೆಂಕಿ ಹಚ್ಚಿದ್ದರಿಂದ ಇಡೀ ಬಸ್ ಸಂಪೂರ್ಣ ಸುಟ್ಟು ಕರಕಲಾಗಿದೆ. ರಾಮನಗರದಲ್ಲಿ ಬಂದ್‌ಗೆ ಕರೆಕೊಟ್ಟಿರುವ ಹಿನ್ನೆಲೆಯಲ್ಲಿ ಚನ್ನಪಟ್ಟಣದಲ್ಲಿ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಬಸ್‌ಗಳಿಲ್ಲದೇ ಪ್ರಯಾಣಿಕರು ಪರದಾಡುವಂತಾಗಿದೆ. 

Recent Comments

Leave Comments

footer
Top