• 18 November 2019 12:13
Jai Kannada
Jai Kannada
Blog single photo
September 03, 2019

 ಟ್ರಬಲ್ ಶೂಟರ್‌ಗೆ ಶುರುವಾಯ್ತು ಟ್ರಬಲ್: ಡಿಕೆಶಿ ಅರೆಸ್ಟ್ 

ನವದೆಹಲಿ:  ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಸತತ ನಾಲ್ಕು ದಿನಗಳ ಕಾಲ ಜಾರಿ ನಿರ್ದೇಶನಾಲಯದಿಂದ ವಿಚಾರಣೆ ಎದುರಿಸಿದ ಕಾಂಗ್ರೆಸ್ ಮುಖಂಡ ಡಿ.ಕೆ. ಶಿವಕುಮಾರ್ ಅವರನ್ನು ವಿಚಾರಣೆಗೆ ಸರಿಯಾಗಿ ಸಹಕರಿಸುತ್ತಿಲ್ಲ ಎಂಬ ನೆವದ ಮೇಲೆ ಬಂಧಿಸಲಾಗಿದೆ. ದೆಹಲಿ ಮನೆಯಲ್ಲಿ ಅಪಾರ ಹಣ ಸಿಕ್ಕ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಕೆಶಿಯನ್ನು ದೆಹಲಿಗೆ ಕರೆಸಿಕೊಂಡಿದ್ದ ಇಡಿ ಸತತ ನಾಲ್ಕು ದಿನಗಳಿಂದ ವಿಚಾರಣೆ ನಡೆಸಿತ್ತು.

ಇಂದು ಕೂಡ ಸುಮಾರು 8 ಗಂಟೆಗಳ ವಿಚಾರಣೆ ಬಳಿಕ ಅರೆಸ್ಟ್ ಮಾಡಿದೆ. ಡಿಕೆಶಿ ಅರೆಸ್ಟ್ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಇಡಿ ಕಚೇರಿಯನ್ನು ಸುತ್ತುವರಿದಿದ್ದಾರೆ.  

ಇಡಿ ಕಚೇರಿ ಮುಂಭಾಗದಲ್ಲಿ ಡಿಕೆಶಿ ಬೆಂಬಲಿಗರು ಕಾದುಕೊಂಡಿದ್ದು, ಡಿಕೆಶಿ ಬಂಧನವನ್ನು ಖಂಡಿಸಿದ್ದಾರೆ. ಡಿಕೆಶಿ ತನಿಖೆ ಮುಗಿದ ಬಳಿಕ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಸಾಧ್ಯತೆಯಿದೆ. ಇಂದು ರಾತ್ರಿ ಅಥವಾ ನಾಳೆ ಡಿಕೆಶಿಯನ್ನು ಕೋರ್ಟ್‌ಗೆ ಹಾಜರುಪಡಿಸಲಾಗುತ್ತದೆ. 

Recent Comments

Leave Comments

footer
Top