• 18 November 2019 11:10
Jai Kannada
Jai Kannada
Blog single photo
September 03, 2019

ಕನಕಪುರದ ಕಲ್ಲುಬಂಡೆಯ ವ್ಯಕ್ತಿತ್ವದ ಡಿಕೆಶಿ ಭಾವುಕರಾಗಿ ಕಣ್ಣೀರಿಟ್ಟರು!

ನವದೆಹಲಿ: ಕಳೆದ ಶುಕ್ರವಾರದಿಂದ ಇಡಿ ವಿಚಾರಣೆಯಿಂದ ಸುಸ್ತುಹೊಡೆದಿರುವ ಡಿ.ಕೆ.ಶಿವಕುಮಾರ್ ಇಂದು ಭಾವುಕರಾಗಿ ಕಣ್ಣೀರು ಹಾಕಿದರು. ಕನಕಪುರದ ಬಂಡೆಯಂತ ವ್ಯಕ್ತಿತ್ವವನ್ನು ಇಡಿ ಅಧಿಕಾರಿಗಳು ಕರಗಿಸಿದ್ದರು. ಈ ನಡುವೆ ತಪ್ಪು ಮಾಡಿದವರು, ಉಪ್ಪುತಿಂದವರು ನೀರು ಕುಡಿಯಬೇಕು ಎಂದು ಕಾರಜೋಳ ಹೇಳಿಕೆ ನೀಡಿದ್ದನ್ನು ಪ್ರಸ್ತಾಪಿಸಿದ ಡಿ.ಕೆ ಶಿವಕುಮಾರ್ ಉಪ್ಪುತಿಂದಿದ್ರೆ ನೀರು ಕುಡಿಯುವುದಕ್ಕೆ ನಾನು ಸಿದ್ಧನಿದ್ದೇನೆ ಎಂದು ಹೇಳಿದ್ದರು. ನನ್ನ ಸ್ಥಿತಿ ನೋಡಿ ತುಂಬಾ ಜನ ಸಂತೋಷ ಪಡ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

. ಹಬ್ಬದ ದಿನವೂ ತಂದೆಗೆ ಪೂಜೆ ಮಾಡಲು ಬಿಜೆಪಿ ಸ್ನೇಹಿತರು ಅವಕಾಶ ಕೊಡಲಿಲ್ಲ ಎಂದು ಡಿಕೆಶಿ ಹೇಳಿ ಭಾವುಕರಾಗಿ ಕಣ್ಣೀರು ಹಾಕಿದರು. ಡಿಕೆಶಿ ಎಂದಿಗೂ ಕಣ್ಣೀರು ಇಟ್ಟವರಲ್ಲ. ಆದರೆ ಅಪ್ಪನಿಗೆ ಎಡೆ ಇಡಲು ಬಿಡದೆ ಇಡಿ ವಿಚಾರಣೆ ನಡೆಸಿದ್ದಕ್ಕೆ ಡಿಕೆಶಿ ದುಃಖಿತರಾಗಿದ್ದರು. ದೆಹಲಿಯ ಅಪಾರ್ಟ್‌ಮೆಂಟ್‌ಗಳಲ್ಲಿ ಮತ್ತು ಡಿಕೆಶಿ ಆಪ್ತರ ಮನೆಯಲ್ಲಿ ಸಿಕ್ಕಿದ ಹಣವು ಈಗ ಡಿಕೆಶಿಗೆ ಉರುಳಾಗಿ ಪರಿಣಮಿಸಿದೆ

ಶುಕ್ರವಾರ ಮತ್ತು ಶನಿವಾರ ನಡೆದ ವಿಚಾರಣೆಗಿಂತ ಇಂದು ಇಡಿ ನಡೆಸಿದ ವಿಚಾರಣೆ ತೀವ್ರತರದ್ದಾಗಿತ್ತು. ಪ್ರಕರಣದ ಆಳಕ್ಕಿಳಿದು ಡಿಕೆಶಿಯನ್ನು ಸತತವಾಗಿ ವಿಚಾರಣೆ ನಡೆಸಿದರು. ಇಂದು 8.59 ಕೋಟಿ ಅಕ್ರಮ ಹಣ ಸಾಗಾಟ, ಪತ್ನಿ ಹೆಸರಿನಲ್ಲಿರುವ ಆಸ್ತಿ, ತಾಯಿ ಹೆಸರಿನಲ್ಲಿರುವ ಆಸ್ತಿ ಬಗ್ಗೆ ಆಳಕ್ಕಿಳಿದು ಇಡಿ ಅಧಿಕಾರಿಗಳು ಪ್ರಶ್ನಿಸಿದರು. ಡಿಕೆಶಿಗೆ ಜಾರಿ ನಿರ್ದೇಶನಾಲಯ ಬಂಧಿಸಬಹುದೇನೋ ಎಂಬ ಆತಂಕವೂ ಡಿಕೆಶಿಗೆ ಎದುರಾಗಿದೆ.

Recent Comments

Leave Comments

footer
Top