• 18 November 2019 11:58
Jai Kannada
Jai Kannada
Blog single photo
September 02, 2019

ಮಂಡ್ಯದಲ್ಲೂ ಪುಂಡಾಟಿಕೆಯಿಂದ ಪೆಟ್ಟು ತಿಂದ ವೆಂಕಟ್ 

 ಮಂಡ್ಯ: ಕೊಡಗಿನಲ್ಲಿ ಕಾರಿನ ಬಾಗಿಲನ್ನು ಎಳೆದು, ಗಾಜಿಗೆ ಕಲ್ಲುಹೊಡೆದು ಸ್ಥಳೀಯರಿಂದ ಗೂಸಾ ತಿಂದಿದ್ದ ಸ್ಯಾಂಡಲ್‌ವುಡ್ ನಟ ಹುಚ್ಚ ವೆಂಕಟ್ ಮತ್ತು ಮಂಡ್ಯದಲ್ಲಿ ಪುಂಡಾಟಿಕೆ ನಡೆಸಿ ಪೆಟ್ಟು ತಿಂದಿದ್ದಾರೆ.  ಮೈಸೂರಿನಿಂದ ಮಂಡ್ಯಕ್ಕೆ ಆಗಮಿಸಿದ ಹುಚ್ಚ ವೆಂಕಟ್ ಲಾಡ್ಜ್‌ವೊಂದರಲ್ಲಿ ತಂಗಿದ್ದರು.

ಹೊಟೆಲ್‌ನ ಇಬ್ಬರ ಪರಿಚಯ ಮಾಡಿಕೊಂಡ ಹುಚ್ಚ ವೆಂಕಟ್ ಭಾನುವಾರ ಬೆಳಿಗ್ಗೆ ಕಾರಿನಲ್ಲಿ ಹೊರಕ್ಕೆ ಹೋಗಿ ಕಬ್ಬಿನ ಹಾಲು ಕುಡಿದು ಹೊಟೆಲ್‌ಗೆ ಹಿಂತಿರುಗಿದ್ದರು. ಹಠಾತ್ತನೆ ವೆಂಕಟ್ ಕಾರಿನ ಮೇಲೆ ತನ್ನ ಕಾಲನ್ನು ಊರಿ ಕಲ್ಲೊಂದನ್ನು ಎತ್ತಿಕೊಂಡು ವಿಂಡ್ ಶೀಲ್ಡ್‌ ಒಡೆದುಹಾಕಿದ್ದ.

ವೆಂಕಟ್‌ನ ದುರ್ವರ್ತನೆಯಿಂದ ರೋಸಿದ ಹೋದ ಯುವಕರು ಚೆನ್ನಾಗಿ ತದಕಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿ ಹುಚ್ಚಾಟವನ್ನು ಪುನರಾವರ್ತಿಸದಂತೆ ವೆಂಕಟ್‌ಗೆ ಎಚ್ಚರಿಕೆ ನೀಡಿದ್ದಾರೆ.

Recent Comments

Leave Comments

footer
Top