• 23 January 2020 22:18
Jai Kannada
Jai Kannada
Blog single photo
September 02, 2019

ಕೆರೆಗೆ ಕಾರು ಉರುಳಿಬಿದ್ದು ಒಂದೇ ಕುಟುಂಬದ ನಾಲ್ವರ ಜಲಸಮಾಧಿ 

ಮಂಗಳೂರು: ಪುತ್ತೂರಿನ ಅರಿಯಡ್ಕದ ಪುದಯಂಗಳದಲ್ಲಿ ರಸ್ತೆಬದಿಯ ಕೆರೆಗೆ ಸೋಮವಾರ ಕಾರೊಂದು ಉರುಳಿಬಿದ್ದು ಕೊಡಗಿನ ಶುಂಠಿಕೊಪ್ಪದ ಒಂದೇ ಕುಟುಂಬದ ನಾಲ್ವರು ಜಲಸಮಾಧಿಯಾಗಿದ್ದಾರೆ. ಕಾರಿನಲ್ಲಿದ್ದ ಅಶೋಕ್(48) ಮಂಗಳೂರಿನಿಂದ ಸುಳ್ಯಕ್ಕೆ ತೆರಳುತ್ತಿದ್ದರು. ಅಶೋಕ್ ಅವರಿಗೆ ಕಾರಿನ ನಿಯಂತ್ರಣ ತಪ್ಪಿ ರಸ್ತೆಯಿಂದ ಜಾರಿ ಕೆರೆಗೆ ಬಿದ್ದಿದೆ.

ಪುತ್ತೂರು ಗ್ರಾಮೀಣ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಾರಿನಿಂದ ಮೃತದೇಹಗಳನ್ನು ಹೊರತೆಗೆದಿದ್ದು, ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಇನ್ನುಳಿದ ಮೃತರನ್ನು ಅಶೋಕ್ ಪತ್ನಿ ಹೇಮಲತಾ ಮತ್ತು ಮಕ್ಕಳಾದ ಯಶಸ್ ಮತ್ತು ವರ್ಷಾ ಎಂದು ಗುರುತಿಸಲಾಗಿದೆ. ಬೆಳಿಗ್ಗೆ 7.30ಕ್ಕೆ ಸಂಭವಿಸಿದ ಈ ಅಪಘಾತದ ನಿಖರ ಕಾರಣ ಗೊತ್ತಾಗಿಲ್ಲ. ಪುತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. 

Recent Comments

Leave Comments

footer
Top