• 18 November 2019 11:11
Jai Kannada
Jai Kannada
Blog single photo
September 01, 2019

370ನೇ ವಿಧಿ ರದ್ದಾಯಿತು, ಪಾಕ್‌ನಿಂದ ಇನ್ನೂ ನಿಲ್ಲದ  ಜಮ್ಮುಕಾಶ್ಮೀರ ಕನವರಿಕೆ 

 ಮಾಲೆ: ಹಿಂದಿನ ಕಾಂಗ್ರೆಸ್ ಸರ್ಕಾರಗಳ ತಪ್ಪು ನೀತಿಯಿಂದಾಗಿ ಈಗ ಭಾರತದ ಅವಿಭಾಜ್ಯ ಅಂಗವಾಗಿರುವ ಜಮ್ಮುಕಾಶ್ಮೀರ ತಮ್ಮದೆಂದು ಪಾಕಿಸ್ತಾನ ಇನ್ನೂ ಬಡಬಡಿಸುತ್ತಿದೆ. ಮುಸ್ಲಿಮರು ಬಹುಸಂಖ್ಯಾತರಾಗಿದ್ದಾರೆಂಬ ಮಾತ್ರಕ್ಕೆ ಪಾಕಿಸ್ತಾನ ವಶಕ್ಕೆ ಜಮ್ಮುಕಾಶ್ಮೀರವನ್ನು ಬಿಟ್ಟುಕೊಡಲು ಸಾಧ್ಯವೇ? ಹಾಗಾದರೇ ಚೀನಾ ರಾಷ್ಟ್ರದಲ್ಲಿ  ಕೆಲವು ಕಡೆ ಮುಸ್ಲಿಮರು ಬಹುಸಂಖ್ಯಾತರಾಗಿದ್ದರೆ ಅದನ್ನು ಪಾಕಿಸ್ತಾನಕ್ಕೆ ನೀಡಬೇಕೆಂದು ಒತ್ತಾಯಿಸುವ ದಮ್ ಪಾಕಿಸ್ತಾನಕ್ಕಿದೆಯಾ? ನಮ್ಮ ದೇಶದ ಅವಿಭಾಜ್ಯ ಅಂಗವಾಗಿರುವ ಜಮ್ಮುಕಾಶ್ಮೀರದ ಬಗ್ಗೆ ತೆಗೆಯುವ ಖ್ಯಾತೆಯನ್ನು ನಿಲ್ಲಿಸುವ ಲಕ್ಷಣ ಪಾಕಿಸ್ತಾನ ತೋರಿಸುತ್ತಿಲ್ಲ.

ಮಾಲ್ಡೀವ್ಸ್ ಸಂಸತ್ತಿನಲ್ಲಿ ಭಾನುವಾರ ಭಾರತ ಮತ್ತು ಪಾಕಿಸ್ತಾನದ ಪ್ರತಿನಿಧಿಗಳ ನಡುವೆ ಕಾಶ್ಮೀರದ ವಿಷಯಕ್ಕೆ ಸಂಬಂಧಿಸಿದಂತೆ ಬಿಸಿ, ಬಿಸಿ ವಾಗ್ವಾದ ನಡೆಯಿತು. ಸುಸ್ಥಿರ ಅಭಿವೃದ್ಧಿ ಗುರಿ ಕುರಿತ 4ನೇ ದಕ್ಷಿಣ ಏಷ್ಯಾ ಸ್ಪೀಕರ್ಸ್ ಶೃಂಗಸಭೆಯಲ್ಲಿ  ಜಮ್ಮುಕಾಶ್ಮೀರದಲ್ಲಿ 370ನೇ ವಿಧಿ ರದ್ದುಮಾಡಿದ ಭಾರತದ ಕ್ರಮದ ವಿರುದ್ಧ ಪಾಕ್ ಖ್ಯಾತೆ ತೆಗೆಯಿತು. ಪಾಕಿಸ್ತಾನ ಉಪ ಸ್ಪೀಕರ್ ಕಾಸಿಮ್ ಖಾನ್ ಸುರಿ, ಭಾರತದ ರಾಜ್ಯಸಭೆ ಉಪಸಭಾಪತಿ ಹರಿವಂಶ್ ನಾರಾಯಣ್ ಸಿಂಗ್ ಮತ್ತು ಪಾಕಿಸ್ತಾನದ ಸೆನೆಟ್ ಸದಸ್ಯೆ ಕುರಾಟುಲೈನ್ ಮಾರಿ ನಡುವೆ ಬಿಸಿ ಬಿಸಿ ಮಾತಿನ ಚಕಮಕಿ ನಡೆಯಿತು.

ಪಾಕ್ ಉಪಸ್ಪೀಕರ್ ಸುರಿ ಕಾಶ್ಮೀರ ವಿಷಯವನ್ನು ಎತ್ತಿ, ಮಾನವ ಹಕ್ಕು ಉಲ್ಲಂಘನೆಯಾಗಿದೆಯೆಂದು ಕೂಗಿದಾಗ, ಭಾರತದ ಉಪಾಧ್ಯಕ್ಷ ಸಿಂಗ್ ಎದ್ದುನಿಂತು ಅವರ ಪ್ರತಿಪಾದನೆಯನ್ನು ತೀವ್ರವಾಗಿ ಖಂಡಿಸಿದರು. ಈ ಕ್ರಿಯಾದೇಶವು ಇಲ್ಲಿ ನೀಡಿದ ಹೇಳಿಕೆಗೆ ಈ ವೇದಿಕೆಯಲ್ಲಿ ಭಾರತದ ಆಂತರಿಕ ವಿಚಾರ ಚರ್ಚಿಸೋದಕ್ಕೆ ನಾವು ಬಲವಾಗಿ ವಿರೋಧಿಸುತ್ತೇವೆ ಎಂದು ಸಿಂಗ್ ಹೇಳಿದಗರು.

Recent Comments

Leave Comments

footer
Top