• 18 November 2019 12:43
Jai Kannada
Jai Kannada
Blog single photo
September 01, 2019

ಗಣೇಶ ಹಬ್ಬದಲ್ಲೂ ಡಿಕೆಶಿಗೆ ವಿಚಾರಣೆಯಿಂದ ರಜೆ ನೀಡದ ಇಡಿಗೆ ಕುಮಾರಸ್ವಾಮಿ ತರಾಟೆ 

ಬೆಂಗಳೂರು: ಗಣೇಶ ಚತುರ್ಥಿಯ ದಿನ ಜಾರಿ ನಿರ್ದೇಶನಾಲಯದ ಎದುರು ಹಣದ ಅಕ್ರಮ ವರ್ಗಾವಣೆಗೆ ಸಂಬಂಧಿಸಿದ ವಿಚಾರಣೆಯಿಂದ ವಿನಾಯಿತಿ ನೀಡಬೇಕೆಂಬ ಡಿಕೆ ಶಿವಕುಮಾರ್ ಮನವಿಯನ್ನು ಜಾರಿ ನಿರ್ದೇಶನಾಲಯ ನಿರಾಕರಿಸಿದ್ದಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡಿದ್ದಾರೆ. ಹಬ್ಬದ ದಿವಸ ವಿಚಾರಣೆಗೆ ಹಾಜರಾಗುವಂತೆ ಇಡಿ ಆದೇಶಿಸಿರುವುದು ಸೇಡಿನ ಮನೋಭಾವವನ್ನು ಬಿಂಬಿಸುತ್ತದೆ ಎಂದು ಕುಮಾರಸ್ವಾಮಿ ಟೀಕಿಸಿದರು.

ಶಿವಕುಮಾರ್ ಹಣ ಅಕ್ರಮ ವರ್ಗಾವಣೆಗೆ ಸಂಬಂಧಿಸಿ 2ನೇ ದಿನವಾದ ಶನಿವಾರ ಕೂಡ ಇಡಿ ಮುಂದೆ ಹಾಜರಾಗಿ ಸತತ 8 ಗಂಟೆಗೂ ಹೆಚ್ಚು ಕಾಲದ ವಿಚಾರಣೆ ಎದುರಿಸಿದ್ದರು.  ಇಡಿ ಪುನಃ ಸೋಮವಾರ ವಿಚಾರಣೆಗೆ ಹಾಜರಾಗುವಂತೆ ಆದೇಶಿಸಿತ್ತು. ಗೌರಿ ಗಣೇಶ ಹಿಂದುಗಳಿಗೆ ಮುಖ್ಯ ಹಬ್ಬ. ಅದಕ್ಕಾಗಿ ಒಂದು ದಿನ ಬಿಡುವು ನೀಡಬೇಕೆಂದು ಶಿವಕುಮಾರ್ ಕೇಳಿದ್ದರೂ ಇಡಿ ಅಧಿಕಾರಿಗಳು ನಿರಾಕರಿಸಿದ್ದರು.

ಇದು ಸೇಡಿನ ಮನೋಭಾವವಲ್ಲದೇ ಮತ್ತೇನು ಎಂದು ಕುಮಾರಸ್ವಾಮಿ ಕೇಳಿದರು. ಶನಿವಾರ ಸಂಜೆ ವರದಿಗಾರರ ಜತೆ ಮಾತನಾಡುತ್ತಿದ್ದ ಅವರು ತಮ್ಮ ಕುಟುಂಬದ ಸಂಪ್ರದಾಯದ ಪ್ರಕಾರ, ಹಬ್ಬದ ದಿನ ಅವರ ಪಿತೃಗಳಿಗೆ ಪ್ರಾರ್ಥನೆ ಸಲ್ಲಿಸುವುದಾಗಿ ತಿಳಿಸಿದರು. ಆದರೆ ಅದಕ್ಕೆ ನಿರಾಕರಿಸಿದ ಇಡಿ ಅಧಿಕಾರಿಗಳು ಬೆಳಿಗ್ಗೆ 11 ಗಂಟೆಗೆ ಹಾಜರಾಗುವಂತೆ ಸಮನ್ಸ್ ಕಳಿಸಿದ್ದಾರೆ ಎಂದು ಶಿವಕುಮಾರ್ ತಿಳಿಸಿದರು.

Recent Comments

Leave Comments

footer
Top