• 18 November 2019 12:12
Jai Kannada
Jai Kannada
Blog single photo
August 29, 2019

ದಕ್ಷಿಣ ಕನ್ನಡದಲ್ಲಿ ಡೆಂಗ್ಯೂ ಜ್ವರಕ್ಕೆ ಮತ್ತಿಬ್ಬರು ಬಲಿ 

ಮಂಗಳೂರು:  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡೆಂಗ್ಯೂ ಜ್ವರಕ್ಕೆ ಬುಧವಾರ ಇಬ್ಬರು ಬಲಿಯಾಗಿದ್ದಾರೆ. ಒಬ್ಬರು ಡೆಂಗ್ಯೂ ಜ್ವರದಿಂದ ಸತ್ತಿರುವುದು ದೃಢಪಟ್ಟಿದ್ದು, ಇನ್ನೊಬ್ಬರ ಸಾವನ್ನು ಡೆಂಗ್ಯೂ ಜ್ವರ ಶಂಕಿತ ಎಂದು ಹೇಳಲಾಗಿದೆ. ಇಬ್ಬರೂ ದುರ್ದೈವಿಗಳು ತೊಕ್ಕೊಟ್ಟುಗೆ ಸೇರಿದವರು. ಮೃತರನ್ನು ತೊಕ್ಕೊಟ್ಟು ಕುಂಪಾಲಾದ ಜಯಪ್ರಕಾಶ್ ಗಟ್ಟಿ(41) ಮತ್ತು ತೊಕ್ಕೊಟ್ಟು ಚೆಂಬುಗುಡ್ಡೆಯ ಸುಮತಿ(36) ಎಂದು ಗುರುತಿಸಲಾಗಿದೆ. ಜಯಪ್ರಕಾಶ್ ಅವರನ್ನು ಡೆಂಗ್ಯೂ ಜ್ವರ ಚಿಕಿತ್ಸೆಗಾಗಿ ಮೂರು ವಿವಿಧ ಆಸ್ಪತ್ರೆಗಳಿಗೆ ಸೇರಿಸಲಾಗಿದ್ದರೂ ಅವರ ಜೀವ ಉಳಿಸಲಾಗಲಿಲ್ಲ. ಸುಮತಿ ಅವರ ಸಾವು ಬ್ಯಾಕ್ಟೀರಿಯಾ ಸೋಂಕಿನಿಂದ ಆಗಿದ್ದು, ಡೆಂಗ್ಯೂ ಜ್ವರದ ಲಕ್ಷಣ ತೋರಿಸಿಲ್ಲ .

ಅವರ ಪ್ಲೇಟ್ ಲೆಟ್ ಎಣಿಕೆಯಲ್ಲಿ ಒಂದು ಲಕ್ಷಕ್ಕೂ ಅಧಿಕವಿತ್ತು ಎಂದಿದ್ದಾರೆ. ಆದರೆ ಸ್ಥಳೀಯರು ಸುಮತಿ ಡೆಂಗ್ಯೂ ಜ್ವರದಿಂದಲೇ ಮೃತಪಟ್ಟಿದ್ದಾರೆಂಬ ಶಂಕೆ ವ್ಯಕ್ತಪಡಿಸಿದ್ದಾರೆ. ನಿರ್ದಿಷ್ಟ ಪ್ರದೇಶವೊಂದರಲ್ಲೇ ಇಬ್ಬರು ಸಾವನ್ನಪ್ಪಿದ್ದರಿಂದ , ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಫಾಗಿಂಗ್ ಕಾರ್ಯಾಚರಣೆ ಕೈಗೊಂಡಿದ್ದಾರೆ.  ನೀರನ್ನು ಕೊಳೆಯದಂತೆ ನೋಡಿಕೊಳ್ಳಿ ಎಂದು ಸ್ಥಳೀಯರಿಗೆ ಸೂಚಿಸಿದ್ದಾರೆ.

Recent Comments

Leave Comments

footer
Top