• 18 November 2019 11:41
Jai Kannada
Jai Kannada
Blog single photo
August 29, 2019

ಮಣ್ಣಿನ ಗುಡ್ಡ ಕುಸಿದು ಮೂವರು ಮಕ್ಕಳ ಜೀವಂತ ಸಮಾಧಿ 

 ಕೊಪ್ಪಳ: ಮಣ್ಣಿನ ಗುಡ್ಡೆ ಕುಸಿದು ಮೂವರು ಮಕ್ಕಳು ಜೀವಂತ ಸಮಾಧಿಯಾದ ಘಟನೆ ಕನಕಗಿರಿ ತಾಲೂಕಿನ ನಾವಲಿ ಗ್ರಾಮದಲ್ಲಿ ಸಂಭವಿಸಿದೆ. ಈ ದುರಂತ ಘಟನೆಯಲ್ಲಿ ಮೃತಪಟ್ಟ ಮಕ್ಕಳನ್ನು ಸೋನಮ್ (7), ಸವಿತಾ(3) ಮತ್ತು ಕವಿತಾ(1) ಎಂದು ಗುರುತಿಸಲಾಗಿದೆ. ರಾಜಗಢ್ ಜಿಲ್ಲೆಯ ಕೊಲಾಡ್‌ನಿಂದ ವಲಸೆ ಬಂದಿದ್ದ ಕಾರ್ಮಿಕರ ಮಕ್ಕಳಾಗಿದ್ದಾರೆ. ಕಳೆದ ಐದು ತಿಂಗಳಿಂದ ಈ ಮಕ್ಕಳ ತಂದೆ,ತಾಯಿಗಳು ನಾವಲಿ ಗ್ರಾಮದಲ್ಲಿ ಕೆಲಸ ಮಾಡುತ್ತಿದ್ದರು.

ಈ ಕುಟುಂಬ ತೊರೆಯ ಬಳಿಯಿರುವ ಮುಳ್ಳಿನ ಪೊದೆಗಳನ್ನು ಕಡಿದು ಅದನ್ನು ಸುಟ್ಟಾಗ ಸಿಗುವ ಇದ್ದಿಲನ್ನು ಮಾರಿ ಜೀವನ ಸಾಗಿಸುತ್ತಿದ್ದರು. ಗುರುಶಾಂತಯ್ಯ ಎಂಬ ಗ್ರಾಮದಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದು, ಈ ತಂದೆ, ತಾಯಿಗಳು ಮಕ್ಕಳನ್ನು ಆಳವಾದ ಹೊಂಡದಲ್ಲಿ ಆಟವಾಡಲು ಬಿಟ್ಟಿದ್ದರು. ಮಕ್ಕಳು ಆಡುವಾಗ ದಿಢೀರನೇ ಮಣ್ಣುಗುಡ್ಡೆ ಅವರ ಮೇಲೆ ಕುಸಿದು ಮೂರೂ ಮಕ್ಕಳು ಉಸಿರುಗಟ್ಟಿ ಸತ್ತಿವೆ. ಪೊಲೀಸರು ತನಿಖೆಗೆ ಆಗಮಿಸಿಾದಗ ಗ್ರಾಮಸ್ಥರು ಪೊಲೀಸರನ್ನು ತರಾಟೆಗೆ ತೆಗೆದುಕೊಂಡು ಅಕ್ರಮ ಮರಳುಗಾರಿಕೆ ಈ ಮಕ್ಕಳನ್ನು ಬಲಿತೆಗೆದುಕೊಂಡಿದ್ದು, ನಿಮ್ಮ ಕಣ್ಣೆದುರಿಗೆ ನಡೆಯುತ್ತಿದ್ದರೂ ಏಕೆ ಕ್ರಮ ಕೈಗೊಂಡಿಲ್ಲವೆಂದು ದಬಾಯಿಸಿದರು.

ಕಂದಾಯ ಇನ್ಸ್‌ಪೆಕ್ಟರ್ ಅವರನ್ನು ಅಮಾನತುಗೊಳಿಸಿ ಮರಳು ಮಾಫಿಯಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದರು. ಭಾರೀ ಮಣ್ಣುಗುಡ್ಡೆಯಿಂದ ಮಕ್ಕಳ ದೇಹಗಳನ್ನು ಹೊರತೆಗೆಯಲಾಗಿದ್ದು, ಪೊಲೀಸ್ ವಾಹನದಲ್ಲಿ ಕನಕಗಿರಿ ಆರೋಗ್ಯ ಕೇಂದ್ರಕ್ಕೆ ಕಳಿಸಲಾಗಿದೆ.

Recent Comments

Leave Comments

footer
Top