• 18 November 2019 11:14
Jai Kannada
Jai Kannada
Blog single photo
August 29, 2019

ಸಿಎಂ ಸಂತ್ರಸ್ತರಿಗೆ ಪರಿಹಾರವನ್ನು ಧೈರ್ಯದಿಂದ ಕೇಳದಷ್ಟು ಬಲಹೀನರಾಗಿದ್ದಾರಾ: ಗುಂಡೂರಾವ್ ಪ್ರಶ್ನೆ 

ಬೆಂಗಳೂರು:  ಬೆಂಗಳೂರಿನಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಮುಖಂಡರು ಮೌರ್ಯ ಸರ್ಕಲ್‌ನ ಗಾಂಧಿ ಪ್ರತಿಮೆ ಪ್ರತಿಭಟನೆ ಆರಂಭಿಸಿದ್ದಾರೆ. ರಾಜ್ಯಸರ್ಕಾರ ಕೇಂದ್ರದಿಂದ ಶೀಘ್ರದಲ್ಲೇ ಪ್ರವಾಹ ಪರಿಹಾರ ಕಾಮಗಾರಿಗೆ ಹಣ ತರುವುದಕ್ಕೆ ವಿಫಲವಾಗಿದೆ. ಒಂದು ಸಾವಿರ ಕೋಟಿ ರೂ. ಪ್ರವಾಹಪೀಡಿತರಿಗೆ ಪರಿಹಾರ ನೀಡುವುದಾಗಿ ಕೇಂದ್ರಸರ್ಕಾರ ಘೋಷಿಸಿದ್ದರೂ ಆ ಹಣವನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಇದರಿಂದ ಪ್ರವಾಹದಿಂದ ಮನೆ, ಮಠ ಕಳೆದುಕೊಂಡು ಸಂತ್ರಸ್ತರಾದವರು ಬೀದಿಗೆ ಬಿದ್ದಿದ್ದಾರೆ. ಅವರಿಗೆ ತಕ್ಷಣವೇ ಪರಿಹಾರ ಹಣವನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಲಾಯಿತು.

 ಅತಿವೃಷ್ಟಿ ಹಾಗೂ ಅನಾವೃಷ್ಟಿ ನಿಭಾಯಿಸುವುದಕ್ಕೆ ಬಿಜೆಪಿ ವಿಫಲವಾಗಿದೆ. ಪ್ರವಾಹ ಪೀಡಿತರಿಗೆ ಸೂಕ್ತ ಸೌಲಭ್ಯ ಕಲ್ಪಿಸಿಕೊಡುವಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಕಾಂಗ್ರೆಸ್ ಮುಖಂಡ ಗುಂಡೂರಾವ್ ದೂರಿದರು. ಸಿಎಂ ಅವರಿಗೆ ಧೈರ್ಯದಿಂದ ಪರಿಹಾರ ಕೇಳುವುದಕ್ಕೆ ಆಗುವುದಿಲ್ಲವೇ, ಅವರು ಅಷ್ಟೊಂದು ಬಲಹೀನರಾಗಿದ್ದೀರಾ ಎಂದು ಗುಂಡೂರಾವ್ ಪ್ರಶ್ನಿಸಿದರು. ಸರ್ವಪಕ್ಷ ನಿಯೋಗವನ್ನು ಕರೆದುಕೊಂಡು ಹೋಗಿ. ನಿಮಗಿಲ್ಲದ ಧೈರ್ಯ ನಮಗಿದೆ. ನಾವು ಅವರ ತಪ್ಪುಗಳನ್ನು ಹೇಳುತ್ತೇವೆ ಎಂದು ಗುಂಡೂರಾವ್ ಹೇಳಿದರು. ಜನಪರ ಕಾಳಜಿಯಿಲ್ಲದೇ ಹೋದರೆ ಕುರ್ಚಿಯಲ್ಲಿ ಕೂರು ನೈತಿಕತೆ ನಿಮಗಿಲ್ಲ ಎಂದರು.

 ಸಿದ್ದರಾಮಯ್ಯ, ರಾಮಲಿಂಗಾರೆಡ್ಡಿ, ಗುಂಡೂರಾವ್ ಸೇರಿದಂತೆ ಹಲವಾರು ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದರು.  ಯಡಿಯೂರಪ್ಪ ನಿವಾಸದ ಸುತ್ತಲೇ ಎಲ್ಲ ಸಚಿವರು ಗಿರಕಿ ಹೊಡೆಯುತ್ತಿದ್ದಾರೆಂದೂ ಪ್ರವಾಹ ಪೀಡಿತರಿಗೆ ಸೂಕ್ತ ಪರಿಹಾರ ಒದಗಿಸುವಲ್ಲಿ ವಿಫಲರಾಗಿದ್ದಾರೆಂದು  ಕಾಂಗ್ರೆಸ್ ಮುಖಂಡರು ದೂರಿದರು. ಸಂಜೆ ಐದು ಗಂಟೆಯವರೆಗೆ ಧರಣಿ ಕುಳಿತುಕೊಳ್ಳುವ ಕಾಂಗ್ರೆಸ್ ಮುಖಂಡರು ಬಳಿಕ ರಾಜ್ಯಪಾಲರಿಗೆ ತೆರಳಿ ಮನವಿ ಸಲ್ಲಿಸಲಿದ್ದು, ಕರ್ನಾಟಕದಲ್ಲಿನ ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವಂತೆ ಒತ್ತಾಯಿಸಲಿದ್ದಾರೆ. 

Recent Comments

Leave Comments

footer
Top