• 15 December 2019 14:11
Jai Kannada
Jai Kannada
Blog single photo
August 19, 2019

100 ಮೀಟರ್ 11 ಸೆಕೆಂಡುಗಳಲ್ಲಿ ಓಡಿದ ಓಟಗಾರ ಬೋಲ್ಟ್ ದಾಖಲೆ ಮುರಿಯುತ್ತಾರಾ?

 ಭೋಪಾಲ: ಮಧ್ಯಪ್ರದೇಓಶದ ಶಿವಪುರಿಯ ರಾಮೇಶ್ವರ್ ಗುರ್ಜಾರ್ ಬರಿಗಾಲಿನಲ್ಲಿ  100 ಮೀಟರ್ ದೂರವನ್ನು 11 ಸೆಕೆಂಡುಗಳಲ್ಲಿ ಓಡಿದ್ದು ವೈರಲ್ ಆದ ಬಳಿಕ ಅವರಿಗೆ ಸರ್ಕಾರವು ವಿಪುಲ ಬೆಂಬಲ ನೀಡಿದೆ. ವಿಡಿಯೊ ಬಳಿಕ, ರಾಮೇಶ್ವರ್ ಅವರನ್ನು ಮಧ್ಯಪ್ರದೇಶದ ಕ್ರೀಡಾಸಚಿವರು ಭೇಟಿ ಮಾಡಿ ಭೋಪಾಲ್ ಟಿಟಿ ನಗರ ಸ್ಟೇಡಿಯಂನಲ್ಲಿ ಸ್ಪೀಡ್ ಟೆಸ್ಟ್‌ಗೆ ಒಳಪಡುವಂತೆ ಸೂಚಿಸಿದರು. ನನ್ನ ಕಳೆದುಹೋದ ಎಮ್ಮೆಗಳಿಗೆ ಹುಡುಕುತ್ತಿದ್ದಾಗ ಕ್ರೀಡಾಸಚಿವರು ನನಗೆ ಕರೆ ಮಾಡಿದ್ದರು. ನಾನು ಉಸೇನ್ ಬೋಲ್ಟ್ ಅವರ 100 ಮೀ. ಓಟವನ್ನು ಟಿವಿಯಲ್ಲಿ ನೋಡಿದ್ದೆ. ಭಾರತೀಯರಿಗೆ ಏಕೆ ಅದನ್ನು ಸಾಧಿಸುವ ಸಾಮರ್ಥ್ಯವಿಲ್ಲ ಎಂದು ನಾನು ಯೋಚಿಸುತ್ತಿದ್ದೆ. ಸೂಕ್ತ ತರಬೇತಿ ಸಿಕ್ಕಿದರೆ ನಾನು ಬೋಲ್ಟ್ ದಾಖಲೆ ಮುರಿಯುವ ಆಶಾಭಾವನೆ ಹೊಂದಿದ್ದೇನೆ ಎಂದು ರಾಮೇಶ್ವರ್ ತಿಳಿಸಿದರು.

ರಾಮೇಶ್ವರದ ಬರಿಗಾಲಿನ ಓಟಗಾರನ ಬಗ್ಗೆ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಟ್ವೀಟ್ ಮಾಡಿ ಅಡಿಬರಹ ನೀಡಿದ್ದಾರೆ. ಭಾರತವು ಪ್ರತಿಭಾವಂತ ಕ್ರೀಡಾಪಟುಗಳಿಂದ ಕೂಡಿದೆ. ಸೂಕ್ತ ಅವಕಾಶ ಮತ್ತು ಸರಿಯಾದ ವೇದಿಕೆ ಸಿಕ್ಕಿದರೆ, ಅವರು ಇತಿಹಾಸ ನಿರ್ಮಿಸಲು ಉತ್ತಮ ಸಾಧನೆ ತೋರಲಿದ್ದಾರೆ.

ಈ ಆಕಾಂಕ್ಷಿ ಅಥ್ಲೇಟ್ ಕೌಶಲ್ಯ ವೃದ್ಧಿಗೆ ಬೆಂಬಲ ನೀಡುವಂತೆ ನಾನು ಕೇಂದ್ರ ಕ್ರೀಡಾಸಚಿವ ಕಿರಣ್ ರಿಜ್ಜು ಅವರಿಗೆ ಮನವಿ ಮಾಡುತ್ತೇನೆ ಎಂದು ಬರೆದಿದ್ದರು. ಚೌಹಾಣ್ ಟ್ವೀಟ್‌ಗೆ ರಿಜ್ಜು ಪ್ರತಿಕ್ರಿಯಿಸಿ, ಅವರನ್ನು ನನ್ನ ಬಳಿ ಕರೆತರಲು ಯಾರಿಗಾದರೂ ಹೇಳಿ, ಅವರನ್ನು ಅಥ್ಲೆಟಿಕ್ ಅಕಾಡೆಮಿಯಲ್ಲಿ ತರಬೇತಿ ಕೊಡಿಸುತ್ತೇನೆ ಎಂದು ಉತ್ತರಿಸಿದ್ದಾರೆ.

ವಿಡಿಯೊ ಕ್ಲಿಕ್ ಮಾಡಿ

Recent Comments

Leave Comments

footer
Top