• 15 December 2019 13:08
Jai Kannada
Jai Kannada
Blog single photo
August 16, 2019

ಸಾಲದ ಸುಳಿಯಲ್ಲಿ ಸಿಕ್ಕಿ ನೇಣಿಗೆ ಶರಣಾದ ಕ್ರಿಕೆಟ್ ಆಟಗಾರ ವಿಬಿಸಿ 

ಚೆನ್ನೈ: ಅನೇಕ ಮಂದಿ ಪ್ರತಿಭಾವಂತ ಕ್ರಿಕೆಟ್ ಆಟಗಾರರು ಕ್ರಿಕೆಟ್‍ನಿಂದ ಶ್ರೀಮಂತರಾಗಿದ್ದಾರೆ. ಹೀಗಾಗಿ ಕ್ರಿಕೆಟ್ ಶ್ರೀಮಂತ ಕ್ರೀಡೆ ಎಂದು ಭಾರತದಲ್ಲಿ ಹೆಸರಾಗಿತ್ತು. ಆದರೆ ಭಾರತದ ಕ್ರಿಕೆಟ್ ಅಂಗಳದಲ್ಲಿ ಮಿಂಚಿ ಮರೆಯಾದವರು ವಿ.ಬಿ.ಚಂದ್ರಶೇಖರ್. ಅವರು ಗುರುವಾರ ಸಂಜೆ ಇಲ್ಲಿನ ತಮ್ಮ ಮನೆಯಲ್ಲಿ ನೇಣುಹಾಕಿಕೊಂಡು ಮೃತಪಟ್ಟಿದ್ದಾರೆ. ಆದರೆ ಕ್ರಿಕೆಟ್ ಅವರಿಗೆ ಶ್ರೀಮಂತಿಕೆ ತರಲಿಲ್ಲ. ಬದಲಿಗೆ ಸಾಲದ ಕೂಪಕ್ಕೆ ಸಿಲುಕಿಸಿ ಅದೇ ಕೊರಗಿನಲ್ಲಿ ಆತ್ಮಹತ್ಯೆಗೆ ಶರಣಾದರು.

ಚಂದ್ರಶೇಖರ್ ತಮಿಳುನಾಡು ಪ್ರೀಮಿಯರ್ ಲೀಗ್ ಟ್ವೆಂಟಿ-20 ಟೂರ್ನಿಯಲ್ಲಿ ವಿಬಿ ಕಂಚಿ ವೀರನ್ಸ್ ಫ್ರಾಂಚೈಸಿಯ ಮಾಲೀಕರಾಗಿದ್ದರು. ಫ್ರಾಂಚೈಸಿ ಬೆಳೆಸಲು ದೊಡ್ಡ ಪ್ರಮಾಣದಲ್ಲಿ ಸಾಲ ಮಾಡಿದ್ದರಿಂದ ಅದರ ಹೊರೆಯಿಂದ ಮಾನಸಿಕವಾಗಿ ಕುಗ್ಗಿಹೋಗಿದ್ದರು. ಆರೋಗ್ಯವೂ ಹದಗೆಟ್ಟು ಖಿನ್ನತೆಗೆ ಗುರಿಯಾಗಿದ್ದರು.

ವಿಬಿಸಿ ಉದ್ಯಮಿ ಶ್ರೀನಿವಾಸನ್ ಅವರಿಗೆ ಆಪ್ತರಾಗಿದ್ದರು. ಚೆನ್ನೈಸೂಪರ್ ಕಿಂಗ್ಸ್‌ಗೆ ಧೋನಿಯನ್ನು ಆಯ್ಕೆ ಮಾಡುವುದಕ್ಕೆ ವಿಬಿಸಿ ಪ್ರಮುಖ ಪಾತ್ರ ವಹಿಸಿದ್ದರು. ವಿಕೆಟ್ ಕೀಪರ್ ಮತ್ತು ಬಲಗೈ ಬ್ಯಾಟ್ಸ್ ಮನ್ ಆಗಿದ್ದ ಅವರು 1986ರಿಂದ 1998ರವರೆಗೆ ಪ್ರಥಮ ದರ್ಜೆ ಕ್ರಿಕೆಟ್ ಆಡಿದ್ದರು. ಭಾರತ ತಂಡದಲ್ಲಿ ಏಳು ಅಂತಾರಾಷ್ಟ್ರೀಯ ಏಕ ದಿನ ಪಂದ್ಯಗಳನ್ನು ಆಡಿದ್ದರು. 81 ಪಂದ್ಯಗಳಿಂದ 4999 ರನ್ ಪೇರಿಸಿದ್ದರು.

Recent Comments

Leave Comments

footer
Top