• 09 December 2019 02:43
Jai Kannada
Jai Kannada
Blog single photo
August 14, 2019

ಕಾಶ್ಮೀರದ ಸ್ವಾತಂತ್ರ್ಯಕ್ಕಾಗಿ ಹೋರಾಟಕ್ಕೆ ರೆಡಿ: ಯುದ್ಧದ ಬೆದರಿಕೆ ಹಾಕಿದ ಇಮ್ರಾನ್ 

 ಪಾಕಿಸ್ತಾನ: ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ರದ್ದು ಮಾಡುವ ಭಾರತ ಸರ್ಕಾರದ ನಿರ್ಧಾರದ ಹಿನ್ನೆಲೆಯಲ್ಲಿ ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ ಬುಧವಾರ ಯುದ್ಧದ ದುಸ್ಸಾಹಸಕ್ಕೆ ಇಳಿಯುವ ಬೆದರಿಕೆ ಹಾಕಿದ್ದಾರೆ. ಪಿಒಕೆಯಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, ಕಾಶ್ಮೀರದ ಸ್ವಾತಂತ್ರ್ಯಕ್ಕೆ ತಮ್ಮ ದೇಶದ ಜನರು ಹೋರಾಟಕ್ಕೂ ಸಿದ್ಧವೆಂದು ತಿಳಿಸಿದರು.

 ಸ್ವಾತಂತ್ರ್ಯದ ದಿನ ಅತ್ಯಂತ ಸಂತೋಷ ಪಡುವ ದಿನ. ಆದರೆ ಇಂದು ಕಾಶ್ಮೀರಿ ಸೋದರರ ಸಂಕಷ್ಟದಿಂದ ದುಃಖಿತರಾಗಿದ್ದೇವೆ ಎಂದು ಖಾನ್ ಹೇಳಿಕೆಯಲ್ಲಿ ತಿಳಿಸಿದರು. ಪಾಕಿಸ್ತಾನ ಅಧ್ಯಕ್ಷ ಅರಿಫ್ ಆಳ್ವಿ ಕೂಡ ಕಾಶ್ಮೀರದ ಜತೆ ಒಗ್ಗಟ್ಟನ್ನು ಪ್ರದರ್ಶಿಸಿ, ಕಾಶ್ಮೀರಿಗಳು ಮತ್ತು ಪಾಕಿಸ್ತಾನಿಯರು ಒಂದೇ ಜನರು ಎಂದು ವಿಶ್ಲೇಷಿಸಿದರು.

ಭಾರತದಲ್ಲಿ ಮುಸ್ಲಿಮರ ಹತ್ಯೆಯ ಘಟನೆಗಳ ಬಗ್ಗೆ ಗಮನಸೆಳೆದ ಇಮ್ರಾನ್, ನಮ್ಮ ಸಮುದಾಯದ ಜನರು ಭಯದಲ್ಲಿ ಬದುಕುತ್ತಿದ್ದಾರೆ. ಕಾಶ್ಮೀರದಲ್ಲಿ ಪ್ರಸಕ್ತ ಬೆಳವಣಿಗೆಗಳು ಕಣಿವೆಯಲ್ಲಿ ವಾಸಿಸುವ ಮುಸ್ಲಿಂ ಜನಸಂಖ್ಯೆಗೆ ಅಪಾಯಕಾರಿಯಾಗಿದೆ ಎಂದು ಮಾಧ್ಯಮ ವರದಿಯನ್ನು ಉಲ್ಲೇಖಿಸಿ ತಿಳಿಸಿದರು. 

Recent Comments

Leave Comments

footer
Top