• 17 January 2019 21:20
Jai Kannada
Jai Kannada
Blog single photo
January 17, 2018

 ಆಕಾಶಕ್ಕೆ ಹಾರಿ ಗೋಡೆಗೆ ಸಿಕ್ಕಿಕೊಂಡ ಕಾರು 

ವಾಷಿಂಗ್ಟನ್: ಸಾಮಾನ್ಯವಾಗಿ ಅಪಘಾತಗಳು ನಡೆದಾಗ ವಾಹನಗಳು ನಜ್ಜುಗುಜ್ಜಾಗುವುದನ್ನು, ಅದರೊಳಗಿದ್ದ ಪ್ರಯಾಣಿಕರು ಸಾವು, ನೋವಿನಿಂದ ನರಳುವುದನ್ನು ಕಾಣುತ್ತೇವೆ.

ಆದರೆ ಇಲ್ಲಿನ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಕಾರೊಂದು ಡಿವೈಡರ್‌ಗೆ ಡಿಕ್ಕಿ ಹೊಡೆದು ಮೇಲೆ ಆಕಾಶಕ್ಕೆ ಹಾರಿ  ಮಹಡಿಯಲ್ಲಿದ್ದ ಡೆಂಟಿಸ್ಟ್ ಕಚೇರಿಯ ಗೋಡೆಯಲ್ಲಿ ಸಿಕ್ಕಿಹಾಕಿಕೊಂಡಿತ್ತು. 

ಕ್ರೇನ್ ಮತ್ತು ಇನ್ನೊಂದು ವಾಹನ ಬಳಸಿ ಆ ಕಾರನ್ನು ಕೆಳಕ್ಕೆ ತಂದಿದ್ದು, ಕಾರಿನಲ್ಲಿದ್ದ ಇಬ್ಬರು ಸಣ್ಣಪುಟ್ಟ ಗಾಯಗಳೊಂದಿಗೆ ಬಚಾವಾಗಿದ್ದಾರೆ. ಚಾಲಕ ಮಾದಕದ್ರವ್ಯ ಸೇವಿಸಿದ್ದರಿಂದಾಗಿ ಅಡ್ಡಾದಿಡ್ಡಿ ಕಾರನ್ನು ಚಲಾಯಿಸಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದಾಗಿ ಒಪ್ಪಿಕೊಂಡಿದ್ದಾನೆ. 

Recent Comments

Leave Comments

footer
Top