• 15 December 2019 13:40
Jai Kannada
Jai Kannada
Blog single photo
August 08, 2019

ರೆಪೊ ದರ ಇಳಿಯಿತು, ಆದರೂ ಬ್ಯಾಂಕ್‌ಗಳು ಗ್ರಾಹಕರ ಸಾಲದ ಬಡ್ಡಿ ದರ ಇಳಿಸಿಲ್ಲ

ಮುಂಬೈ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸತತ ನಾಲ್ಕನೇ ಬಾರಿಗೆ ರೆಪೊ ದರಗಳನ್ನು ಇಳಿಸಿದೆ. ಇಂದು ವಿತ್ತೀಯ ಸಮಿತಿ ರೆಪೊ ದರವನ್ನು  35 ಬೇಸಿಸ್ ಪಾಯಿಂಟ್ ಇಳಿಸುವ ಮೂಲಕ ಶೇ. 5.40ಕ್ಕೆ ಇಳಿಕೆ ಮಾಡಿದೆ. ಜೂನ್ ಮೊದಲ ವಾರದಲ್ಲಿ ರೆಪೊ ದರ ಶೇ. 5.75 ಆಗಿತ್ತು. ಒಂಭತ್ತು ವರ್ಷಗಳ ಅವಧಿಯಲ್ಲಿ ಅತೀ ಕಡಿಮೆ ರೆಪೊ ದರ ಇದಾಗಿದೆ.

ರೆಪೊ ದರ ಇಳಿಸಿದ್ದರಿಂದ ಗೃಹ ಸಾಲ ಮತ್ತಿತರ ಸಾಲಗಳ ಮೇಲಿನ ಬಡ್ಡಿದರ ಇಳಿಕೆಯಾಗುತ್ತದೆ ಎಂದು ತಜ್ಞರು ಭಾವಿಸಿದ್ದಾರೆ. ಆದರೆ ನಾಲ್ಕು ಬಾರಿ ರೆಪೊ ದರವನ್ನು ರಿಸರ್ವ್ ಬ್ಯಾಂಕ್ ಇಳಿಸಿದ್ದರೂ ಕೂಡ ಗ್ರಾಹಕರಿಗೆ ಮಾತ್ರ ಯಾವುದೇ ಅನುಕೂಲ ಕಂಡುಬರುವ ಲಕ್ಷಣ ಕಾಣುತ್ತಿಲ್ಲ. ರಿಸರ್ವ್ ಬ್ಯಾಂಕ್ ರೆಪೊ ದರವನ್ನು ಏರಿಸಿದ್ದಾಗ ಬ್ಯಾಂಕುಗಳು ಗ್ರಾಹಕರ ಮೇಲೆ ವಿಧಿಸುವ ಬಡ್ಡಿ ದರ ಏರಿಕೆ ಮಾಡಿತ್ತು.

ಆದರೆ ರಿಸರ್ವ್ ಬ್ಯಾಂಕ್ ರೆಪೊ ದರ ನಾಲ್ಕು ಬಾರಿ ಇಳಿಸಿದ್ದರೂ ಬ್ಯಾಂಕುಗಳು ಸಾಲಗಳ ಮೇಲೆ ಬಡ್ಡಿ ದರ ಇಳಿಸಲು ಹಿಂದೇಟು ಹಾಕುತ್ತಿವೆ. ತಜ್ಞರು ಯಾವುದೇ ಅಭಿಪ್ರಾಯವ್ಯಕ್ತಪಡಿಸಿದರೂ ಅಂತಿಮವಾಗಿ ಗ್ರಾಹಕರ ಸಾಲದ ಮೇಲಿನ ಬಡ್ಡಿ ದರ ಇಳಿಸುವುದು ಬ್ಯಾಂಕ್‌ಗಳ ಜವಾಬ್ದಾರಿಯಾಗಿರುತ್ತದೆ.

Recent Comments

Leave Comments

footer
Top