• 08 April 2020 03:42
Jai Kannada
Jai Kannada
Blog single photo
August 05, 2019

ಬೂದಿ ಮುಚ್ಚಿದ ಕೆಂಡದಂತಿದ್ದ ಜಮ್ಮುಕಾಶ್ಮೀರಕ್ಕೆ ಕೇಂದ್ರಾಡಳಿತದ ಬಿಸಿ ಮುಟ್ಟಿಸಿದ ಅಮಿತ್ ಶಾ 

 ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದಾಗಿನಿಂದ ಜಮ್ಮುಕಾಶ್ಮೀರ ಬೂದಿ ಮುಚ್ಚಿದ ಕೆಂಡದಂತಿದೆ. ಸದಾ ಆಂತರಿಕ ಹಿಂಸಾಚಾರ, ಪಾಕ್ ಭಯೋತ್ಪಾದಕರ ಅಟ್ಟಹಾಸದಿಂದ ಕಾಶ್ಮೀರ ನಲುಗಿಹೋಗಿತ್ತು.   ಬಹುಸಂಖ್ಯಾತ ಮುಸ್ಲಿಮರು  ಹಿಂದೂ ಪಂಡಿತರ ಮೇಲೆ ದೌರ್ಜನ್ಯ, ಅನಾಚಾರದಳನ್ನುು ಅವ್ಯಾಹತವಾಗಿ ನಡೆಸಿದರು.

ಮುಸ್ಲಿಮರ ದೌರ್ಜನ್ಯದಿಂದ ಕಂಗಾಲಾದ ಹಿಂದೂ ಪಂಡಿತರು ಮನೆ, ಮಠಗಳನ್ನು ತ್ಯಜಿಸಿ ಓಡಿಹೋಗಿ ನಿರಾಶ್ರಿತರ ರೀತಿ ಬದುಕಿದ್ದರು. ಕಾಶ್ಮೀರಕ್ಕೆ ಬಹು ಹಿಂದೆಯೇ ಅಂಕಿತ ಹಾಕುವ ಮೂಲಕ ಜಾರಿಯಾಗಿದ್ದ 370ನೇ ವಿಧಿಯ ವಿಶೇಷ ಸ್ಥಾನ ಮಾನ ಮತ್ತು 35ಎ ವಿಧಿ ಜಾರಿಯಿಂದಾಗಿ ತಮ್ಮದೇ ಪ್ರತ್ಯೇಕ ರಾಜ್ಯವೆಂಬ ಭಾವನೆ ಅಲ್ಲಿನ ರಾಜಕೀಯ ಮುಖಂಡರ ಮನಸ್ಸಿನಲ್ಲಿತ್ತು. ಬಹುಸಂಖ್ಯಾತ ಮುಸ್ಲಿಮರಿರುವ ರಾಜ್ಯವಾದ ಕಾಶ್ಮೀರದಲ್ಲಿ ಜನಮತ ಗಣನೆ ನಡೆಯಬೇಕೆಂದು ಅಲ್ಲಿನ ಪ್ರತ್ಯೇಕತವಾದಿ ಮುಖಂಡರು ಒತ್ತಡ ಹಾಕಿದ್ದರು. ಕಾಶ್ಮೀರ ವಿವಾದ ಕುರಿತು ಮಾತುಕತೆಗೆ ಬರುವಂತೆ ಪಾಕಿಸ್ತಾನ ಖ್ಯಾತೆ ತೆಗೆದಿತ್ತಲ್ಲದೇ ಗಡಿಯಾಚೆಯಿಂದ ಭಯೋತ್ಪಾದಕರನ್ನು ನುಸುಳಿಸಿ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿತ್ತು. ಭಯೋತ್ಪಾದಕರ ಹಿಂಸಾಚಾರದಿಂದ ನಲುಗಿಹೋಗಿದ್ದ ಕಾಶ್ಮೀರದಲ್ಲಿ ನೂರಾರು ಜನರು ಇದುವರೆಗೆ ಪ್ರಾಣತೆತ್ತಿದ್ದಾರೆ. ಅಲ್ಲಿ ಮುಸ್ಲಿಂ ಯುವಕರನ್ನು ಸೈನಿಕರ ಮೇಲೆ ಛೂ ಬಿಟ್ಟು ಹಿಂಸಾಚಾರಕ್ಕೆ ಪ್ರತ್ಯೇಕತವಾದಿಗಳು ಪ್ರೇರೇಪಣೆ ನೀಡಿದ್ದರು.

 ಒಂದು ಕಾಲದಲ್ಲಿ ಭಾರತದ ಸ್ವರ್ಗ ಎಂದು ಹೆಸರು ಮಾಡಿದ್ದ ಕಾಶ್ಮೀರ ಇಂದು ಬೂದಿ ಮುಚ್ಚಿದ ಕೆಂಡವಾಗಿದೆ. ಉದ್ಯೋಗಾವಕಾಶಗಳಿಗೆ ತೀವ್ರ ಕೊರತೆ ಉಂಟಾಗಿದೆ. ಉಗ್ರಗಾಮಿಗಳು ಮತ್ತು ಸ್ಥಳೀಯ ಯುವಕರ ಹಿಂಸಾಚಾರದಿಂದ ನಲುಗಿ ಹೋದ ಜಮ್ಮುಕಾಶ್ಮೀರವನ್ನು ಮರುಸ್ಥಿತಿಗೆ ತರಲು ಕಳೆದ ಹಲವಾರು ದಶಕಗಳಿಂದ ಯಾವ ಪ್ರಯತ್ನವೂ ನಡೆಯಲಿಲ್ಲ.  ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಸತತ ಸಮಾಲೋಚನೆ ನಡೆಸಿ ಕೊನೆಗೂ ಅದಕ್ಕೆ ಒಂದು ಪರಿಹಾರವನ್ನು ಕಂಡುಕೊಂಡರು. 

ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ತೆಗೆದು 35 ಎ ವಿಧಿ ರದ್ದುಮಾಡಿ, ಕೇಂದ್ರಾಡಳಿತ ಪ್ರದೇಶವಾಗಿ ಮಾಡಿರುವುದರಿಂದ ದೆಹಲಿ ಮತ್ತು ಪುದುಚೇರಿ ರೀತಿಯಲ್ಲಿ ಜಮ್ಮು ಕಾಶ್ಮೀರದಲ್ಲಿ ಆಡಳಿತವಿರುತ್ತದೆ.ಲಡಾಕ್ ಕೇಂದ್ರಾಡಳಿತ ಪ್ರದೇಶದ ವ್ಯಾಪ್ತಿಯಲ್ಲಿರುತ್ತದೆ.  ಜಮ್ಮುಕಾಶ್ಮೀರದ ವಿಧಾನಸಭೆ ಅವಧಿ 6 ವರ್ಷಗಳಿಂದ 5 ವರ್ಷಕ್ಕೆ ಇಳಿಕೆಯಾಗುತ್ತದೆ. ಜಮ್ಮು ಮತ್ತು ಕಾಶ್ಮೀರದ ಹೊರಗಿನ ಜನರು ಕೂಡ ಅಲ್ಲಿ ಆಸ್ತಿ ಖರೀದಿಸಬಹುದು. 

. ಹೊರ ರಾಜ್ಯದವರು ಬಂದು ಜಮ್ಮುಕಾಶ್ಮೀರದಲ್ಲಿ ನೆಲೆಸಬಹುದು. ಕೈಗಾರಿಕೆಗಳು, ಉದ್ಯಮಗಳು ಜಮ್ಮುಕಾಶ್ಮೀರದಲ್ಲಿ ಆರಂಭವಾಗಿ ಉದ್ಯೋಗಾವಕಾಶಗಳು ಹೆಚ್ಚಲಿದೆ. ಇನ್ನು ಕೇಂದ್ರಾಡಳಿತ ಪ್ರದೇಶವಾಗಿ ಕಾಶ್ಮೀರವನ್ನು ಮಾಡಿರುವುದರಿಂದ ಭಾರತದ ಅವಿಭಾಜ್ಯ ಅಂಗವಾಗುತ್ತದೆ. ಪಾಕಿಸ್ತಾನ ಕಾಶ್ಮೀರದ ಮೇಲೆ ಹಕ್ಕು ಪ್ರತಿಪಾದಿಸಲು ಸಾಧ್ಯವಾಗುವುದಿಲ್ಲ.

Recent Comments

Leave Comments

footer
Top