• 20 October 2019 20:19
Jai Kannada
Jai Kannada
Blog single photo
August 04, 2019

ಮಾರುತಿ ಸುಜುಕಿ ಕಾರುಗಳ ಮಾರಾಟ ತೀವ್ರ ಕುಸಿತ: ಶೇ. 6 ಹುದ್ದೆ ಕಡಿತ

ನವದೆಹಲಿ: ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಮಾರಾಟ ಪ್ರಮಾಣ ತೀವ್ರ ಕುಸಿತ ಅನುಭವಿಸಿದ್ದು, ದೇಶದ ಅತೀ ದೊಡ್ಡ ಕಾರು ಉತ್ಪಾದಕ ಸಂಸ್ಥೆ ಮಾರುತಿ ಸುಜುಕಿ ಕೂಡ ಇದರಿಂದ ಹೊರತಾಗಿಲ್ಲ. ಮಾರುತಿ ಸುಜುಕಿ ವಾಹನಗಳ ಮಾರಾಟದಲ್ಲಿ ತೀವ್ರ ಕುಸಿತ ಅನುಭವಿಸಿದ್ದರಿಂದ ತಾತ್ಕಾಲಿಕ ಗುತ್ತಿಗೆ ಆಧಾರಿತ ಹುದ್ದೆಗಳನ್ನು ಕಡಿತ ಮಾಡಲು ನಿರ್ಧರಿಸಿದೆ.

ದಶಕದಲ್ಲಿ ಅತ್ಯಂತ ಕೆಟ್ಟ ಕುಸಿತವನ್ನು ಈ ಕಂಪನಿ ಎದುರಿಸುತ್ತಿದ್ದು, ವಾಹನಗಳ ಮಾರಾಟ ಕ್ಷಿಪ್ರಗತಿಯಲ್ಲಿ ಕುಸಿಯುತ್ತಿದ್ದು, ಪುನಶ್ಚೇತನದ ಯಾವುದೇ ಲಕ್ಷಣ ಕಾಣುತ್ತಿಲ್ಲ.

ಜೂನ್ 30ಕ್ಕೆ ಕೊನೆಯಾಗುವಂತೆ ಕಂಪನಿ 18845 ತಾತ್ಕಾಲಿಕ ಕಾರ್ಮಿಕರನ್ನು ನೇಮಿಸಿಕೊಂಡಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ ನೇಮಕ ಮಾಡಿದ್ದಕ್ಕಿಂತ ಶೇ. 6ರಷ್ಟು ಅಂದರೆ 1181 ಕಾರ್ಮಿಕರಷ್ಟು ಕಡಿಮೆ ನೇಮಕ ಮಾಡಿದ್ದಾರೆ. ಆದರೆ ಖಾಯಂ ಕಾರ್ಮಿಕ ಶಕ್ತಿಯಾದ 15, 892 ಕಾರ್ಮಿಕರ ಬಲವನ್ನು ಕಡಿತ ಮಾಡಿಲ್ಲ ಎಂದು ಮಾರುತಿ ಸುಜುಕಿ ತಿಳಿಸಿದೆ. ಮಾರುತಿ ಸುಜುಕಿಯ ಮಾರಾಟದಲ್ಲಿ ಈ ವರ್ಷ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 33.5 ರಷ್ಟು ಕುಸಿತ ಅನುಭವಿಸಿದೆ. 
....

Recent Comments

Leave Comments

footer
Top