• 15 October 2018 14:41
Jai Kannada
Jai Kannada
Blog single photo
January 16, 2018

ಆನ್‌ಫೀಲ್ಡ್‌ನಲ್ಲಿ ಅತಿರೇಕದ ವರ್ತನೆಗೆ ಕೊಹ್ಲಿಗೆ ದಂಡ 

ಸೆಂಚುರಿಯನ್: ಆನ್‌ಫೀಲ್ಡ್‌ನಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ಅತಿರೇಕದ ವರ್ತನೆಯಿಂದ ದಂಡ ಕಟ್ಟಬೇಕಾದ ಪರಿಸ್ಥಿತಿ ಎದುರಾಗಿದೆ. ಆಕ್ರಮಣಕಾರಿ ಆಟದಿಂದ ಕ್ಯಾಪ್ಟನ್ ಆಗಿರುವ ವಿರಾಟ್ ಕೊಹ್ಲಿ ಅವರಿಗೆ ಅದೇ ಅಗ್ರೇಸೀವ್ ವರ್ತನೆ ಮುಳುವಾಗಿದೆ.

 ಐಸಿಸಿ ನಿಯಮಗಳನ್ನು ಸೆಂಚೂರಿಯನ್‌ನಲ್ಲಿ ಕೊಹ್ಲಿ ಉಲ್ಲಂಘಿಸಿದ ಆರೋಪ ಹೊತ್ತಿದ್ದಾರೆ. ಕೊಹ್ಲಿ ಸಿಟ್ಟಿನಿಂದ ಚೆಡ್ಡನ್ನು ನೆಲಕ್ಕೆ ಎಸೆದಿದ್ದರಿಂದ ಐಸಿಸಿ ಅವರಿಗೆ ಶೇ. ಪಂದ್ಯ ಶುಲ್ಕದಲ್ಲಿ  ಶೇ. 25ರಷ್ಟು ದಂಡ ವಿಧಿಸಿದೆ.

ಕೊಹ್ಲಿಗೆ ದಂಡದ ಜತೆ ಒಂದು ಡಿಮೆರಿಟ್ ಪಾಯಿಂಟ್ ಕೂಡ ನೀಡಲಾಗಿದೆ ಎಂದು ಐಸಿಸಿ ತಿಳಿಸಿದೆ. ದಕ್ಷಿಣ ಆಫ್ರಿಕಾದ 25ನೇ ಓವರಿನಲ್ಲಿ ಈ ಘಟನೆ ನಡೆಯಿತು. ಮೂರನೇ ಸೆಷನ್‌ನಲ್ಲಿ ಬಿದ್ದ ಮಳೆಯಿಂದ ಪಿಚ್ ಒದ್ದೆಯಾಗಿದೆ ಎಂದು ಅಂಪೈರ್ ಮೈಕೇಲ್ ಗಫ್ ಅವರಿಗೆ ಕೊಹ್ಲಿ ದೂರು ಸಲ್ಲಿಸಿದ್ದರು. ಗಫ್ ಹೇಳಿಕೆಯಿಂದ ಸಿಟ್ಟಿಗೆದ್ದು ಚೆಂಡನ್ನು ಆಕ್ರಮಣಕಾರಿ ರೀತಿಯಲ್ಲಿ  ಜೋರಾಗಿ ನೆಲಕ್ಕೆ ಬಡಿದಿದ್ದರು.

Recent Comments

Leave Comments

footer
Top