• 15 December 2019 13:44
Jai Kannada
Jai Kannada
Blog single photo
July 17, 2019

 ಶಾಸಕರ ರಾಜೀನಾಮೆ ವಿಚಾರವಾಗಿ ಸುಪ್ರೀಂಕೋರ್ಟ್ ತೀರ್ಪಿನಿಂದ ಯಾರಿಗೆ ಪ್ರಯೋಜನ?

ಅತೃಪ್ತ ಶಾಸಕರು ಸ್ಪೀಕರ್‌ಗೆ ಸಲ್ಲಿಸಿದ ರಾಜೀನಾಮೆ ವಿಚಾರವಾಗಿ ಸುಪ್ರೀಂಕೋರ್ಟ್ ಮಹತ್ವದ ತೀರ್ಮಾನವನ್ನು ತೆಗೆದುಕೊಳ್ಳುವ ಮೂಲಕ ಸಂವಿಧಾನದ ಆಶಯಗಳನ್ನು ಎತ್ತಿಹಿಡಿದಿದೆ. ಅವರ ರಾಜೀನಾಮೆ ನಿರ್ಧಾರವು ಇನ್ನೂ ಸ್ಪೀಕರ್ ಇತ್ಯರ್ಥಗೊಳಿಸಬೇಕಾಗಿರುವುದರಿಂದ ಅವರು ಅಧಿವೇಶನಕ್ಕೆ  ಹಾಜರಾಗುವುದು, ಬಿಡುವುದು ಅವರ ವಿವೇಚನೆಗೆ ಬಿಟ್ಟಿದ್ದು ಎಂದು ಸುಪ್ರೀಂಕೋರ್ಟ್ ತೀರ್ಪಿನಲ್ಲಿ ತಿಳಿಸಿದೆ. ಆದರೆ ಸುಪ್ರೀಂಕೋರ್ಟ್ ನೀಡಿದ ಆದೇಶದ ಸಾಧಕ, ಬಾಧಕಗಳನ್ನು ಪರಿಶೀಲಿಸಿದಾಗ ಇದು ಒಂದು ರೀತಿಯಲ್ಲಿ ಅತೃಪ್ತ ಶಾಸಕರಿಗೆ ಮತ್ತು ಸ್ಪೀಕರ್‌ಗೆ ಇಬ್ಬರಿಗೂ ಅನುಕೂಲಕರವಾಗಿದೆ.

ಸ್ಪೀಕರ್ ಅವರು ಕಾಲಮಿತಿಯಲ್ಲಿ ನಿರ್ಧಾರ ಪ್ರಕಟಿಸಬೇಕು ಎಂದು ಹೇಳುವ ಮೂಲಕ ಸ್ಪೀಕರ್ ಅಧಿಕಾರ ವ್ಯಾಪ್ತಿಯಲ್ಲಿ ಸುಪ್ರೀಂಕೋರ್ಟ್ ಯಾವುದೇ ಹಸ್ತಕ್ಷೇಪ ಮಾಡಿಲ್ಲ. ಸ್ಪೀಕರ್ ಇಂತಿಷ್ಟೆ ಅವಧಿಯಲ್ಲಿ ನಿರ್ಧಾರ ಪ್ರಕಟಿಸಬೇಕು ಎಂದು ಸುಪ್ರೀಂಕೋರ್ಟ್ ಆದೇಶ ನೀಡದಿರುವುದರಿಂದ ಸ್ಪೀಕರ್ ತಮ್ಮ ವಿವೇಚನೆಯಂತೆ ಕಾಲಮಿತಿಯೊಳಗೆ ಕ್ರಮ ತೆಗೆದುಕೊಳ್ಳಲು ನೆರವಾಗುತ್ತದೆ. ಇದಲ್ಲದೇ ರಾಜೀನಾಮೆ ಅಂಗೀಕಾರ ಮತ್ತು ಅನರ್ಹತೆ ಬಗ್ಗೆಯೂ ಸ್ಪೀಕರ್ ನಿರ್ಧಾರ ಕೈಗೊಳ್ಳುವುದು ಅವರ ವಿವೇಚನೆಗೆ ಬಿಟ್ಟ ವಿಚಾರ ಎಂದೂ ಸುಪ್ರೀಂಕೋರ್ಟ್ ಹೇಳಿದೆ.

ರಾಜೀನಾಮೆ ನೀಡಿದ ಶಾಸಕರು ಅಧಿವೇಶನಕ್ಕೆ ಹಾಜರಾಗುವಂತೆ ಸ್ಪೀಕರ್ ತೀರ್ಮಾನದವರೆಗೆ ಒತ್ತಾಯಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿರುವುದರಿಂದ ಸರ್ಕಾರ ಶಾಸಕರ ವಿರುದ್ಧ ನೀಡಿದ ವಿಪ್‌ಗೆ ಯಾವುದೇ ಪ್ರಯೋಜನವಿಲ್ಲ. ಆ ವಿಪ್ ಅಸ್ತ್ರವನ್ನು ಪ್ರಯೋಗಿಸಿ ಅವರನ್ನು ಅನರ್ಹಗೊಳಿಸಲು ಸಾಧ್ಯವಿಲ್ಲ. ಇದರಿಂದ ಅತೃಪ್ತ ಶಾಸಕರು ಸದನಕ್ಕೆ ಹಾಜರಾಗದಿದ್ದರೂ ವಿಪ್ ಅಸ್ತ್ರದಿಂದ ಬಚಾವಾಗುತ್ತಾರೆ. ಇವೆಲ್ಲಾ ವಿಷಯಗಳ ನಡುವೆ ಸ್ಪೀಕರ್ ಇಂದೇ ನಿರ್ಧಾರ ಕೈಗೊಂಡು 15 ಶಾಸಕರನ್ನು ಶಾಸಕತ್ವದಿಂದ ಅನರ್ಹಗೊಳಿಸಿದರೆ ಶಾಸಕರಿಗೆ  ಸಂಕಟದ ಪರಿಸ್ಥಿತಿ ಉಂಟಾಗಲಿದೆ.

Recent Comments

Leave Comments

footer
Top