• 20 October 2019 20:02
Jai Kannada
Jai Kannada
Blog single photo
July 13, 2019

ಭಾರತದ ಸೆಮಿಫೈನಲ್ ಸೋಲಿಗೆ ಟ್ವೀಟ್ ಮಾಡಿದ ವಿವೇಕ್‌ಗೆ ನೆಟ್ಟಿಗರ ತರಾಟೆ 

ಮುಂಬೈ: ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಪೋಸ್ಟ್‌ಗಳಿಗಾಗಿ ಆಗಾಗ್ಗೆ ನೆಟ್ಟಿಗರ ಕೋಪಕ್ಕೆ ಗುರಿಯಾಗುವ ವಿವೇಕ್ ಒಬೆರಾಯ್ ಅವರು ಮತ್ತೊಮ್ಮೆ ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಭಾರತದ ಕ್ರಿಕೆಟ್ ತಂಡದ ಅಭಿಮಾನಿಗಳನ್ನು ಉದ್ದೇಶಿಸಿ ವಿವೇಕ್ ಒಬೆರಾಯ್ ಪೋಸ್ಟ್ ಭಾರತ ಕ್ರಿಕೆಟ್ ಅಭಿಮಾನಿಗಳನ್ನು ಕೆರಳಿಸಿದೆ. ಜಿಫ್‌ನಲ್ಲಿ, ಭಾರತದ ಅಭಿಮಾನಿಯೊಬ್ಬ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ತನ್ನ ಕಡೆ ಬರುತ್ತಿರುವ ಮಹಿಳೆ ತನ್ನನ್ನು ಆಲಂಗಿಸಿಕೊಳ್ಳುತ್ತಾಳೆಂದು ಭಾವಿಸಿದ್ದ

. ಬದಲಿಗೆ ಆ ಮಹಿಳೆ ಅವನ ಹಿಂದೆ ಬರುತ್ತಿದ್ದ ಇನ್ನೊಬ್ಬ ಪುರುಷನನ್ನು ಆಲಂಗಿಸಿಕೊಳ್ಳುತ್ತಾಳೆ. ಭಾರತ-ನ್ಯೂಜಿಲೆಂಡ್ ನಡುವೆ ವಿಶ್ವಕಪ್ ಸೆಮಿಫೈನಲ್ಸ್‌ನಲ್ಲಿ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಆಗಿದ್ದು ಇದೇ ಎಂದು ವಿವೇಕ್ ತಮ್ಮ ಜಿಫ್ ಇಮೇಜ್ ಟ್ವೀಟ್ ಮಾಡಿದ್ದರು. ಆದರೆ ವಿವೇಕ್ ಟ್ವೀಟ್ ಸಾಮಾಜಿಕ ಜಾಲ ತಾಣ ಬಳಕೆದಾರರಿಗೆ ರುಚಿಸಿಲ್ಲ. ಮಿ. ಒಬೆರಾಯ್, ಸ್ವಲ್ಪ ಪಕ್ವತೆಯಿಂದ ಇರಿ, ಇಲ್ಲದಿದ್ದರೆ ಜನರು ಹಗುರವಾಗಿ ನಿಮ್ಮನ್ನು ಭಾವಿಸುತ್ತಾರೆ ಎಂದು ಬಳಕೆದಾರರೊಬ್ಬರು ಟ್ವೀಟ್ ಮಾಡಿದ್ದಾರೆ.

ಟೀಂ ಇಂಡಿಯಾಗೆ ಗೌರವ ಕೊಡಿ ಎಂದು ಇನ್ನೊಬ್ಬರ ನೆಟ್ಟಿಗರು ಹೇಳಿದ್ದಾರೆ. ಕನಿಷ್ಠ ಅವರು ರಾಷ್ಟ್ರಕ್ಕಾಗಿ ಹೋರಾಡಿ ಸೆಮಿಫೈನಲ್ ಮುಟ್ಟಿದ್ದಾರೆ. ಆದರೆ ನಿಮ್ಮ ರೀತಿ ಪ್ರತಿಯೊಂದು ಫ್ಲಾಪ್ ಚಿತ್ರ ನೀಡಿ ನೆಲಕಚ್ಚುವುದಿಲ್ಲ ಎಂದಿದ್ದಾರೆ. ಇನ್ನೊಬ್ಬ ಟ್ವಿಟರಿಗ ಬರೆಯುತ್ತಾ, ನೀವು ವೃತ್ತಿಜೀವನದ ಆಶೋತ್ತರಗಳನ್ನು ಬೆನ್ನಟ್ಟುವಾಗ ಅದೇ ರೀತಿ ಆಗಿದ್ದು. ನಿಮ್ಮ ಯಾವುದೇ ಚಿತ್ರ 50 ಕೋಟಿ ಲಾಭದ ಗಡಿ ದಾಟಿದೆಯಾ ಎಂದು ವ್ಯಂಗ್ಯವಾಡಿದ್ದಾರೆ.
 ವಿಡಿಯೊ ಕ್ಲಿಕ್ ಮಾಡಿ

Recent Comments

Leave Comments

footer
Top