• 16 October 2018 15:38
Jai Kannada
Jai Kannada
Blog single photo
January 14, 2018

ಕಾರು ಮರಕ್ಕೆ ಗುದ್ದಿ ಹಿರಿಯ ಪತ್ರಕರ್ತ ವೀರೇಶ್ ಮರಣ 

ಬೆಳಗಾವಿ: ಬೆಳಗಾವಿಯ ಖಾನಾಪುರ ತಾಲೂಕಿನ ನಂದಗಡದಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಹಿರಿಯ ಪತ್ರರ್ತ ವೀರೇಶ್ ಹಿರೇಮಠ್ ಎಂಬವರು ಮೃತಪಟ್ಟಿದ್ದಾರೆ. ವೀರೇಶ್ ಅವರು ತಮ್ಮ ಕುಟುಂಬದೊಂದಿಗೆ ಗೋವಾ ಪ್ರವಾಸ ಮುಗಿಸಿ ಬಾಗಲಕೋಟೆಗೆ ಹಿಂದಿರುಗುತ್ತಿದ್ದರು. ಕಾರು ನಂದಗಡ ಬಳಿ ಬರುತ್ತಿದ್ದಂತೆಯೇ ನಿದ್ದೆ ಮಂಪರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಗುದ್ದಿದೆ.

ಇದರ ಪರಿಣಾಮವಾಗಿ ವೀರೇಶ್ ಸ್ಥಳದಲ್ಲೇ ಮೃತಪಟ್ಟಿದ್ದು, ಪತ್ನಿ ಗೌರಿ, ಕಾರು ಚಾಲಕ ಸುನಿಲ್‌ಗೆ ಗಂಭೀರ ಗಾಯಗಳಾಗಿವೆ. ವೀರೇಶ್ ಅವರು ಬಾಗಲಕೋಟೆ ಬಿವಿವಿ ಕಾಲೇಜಿನಲ್ಲಿ ಪತ್ರಿಕೋದ್ಯಮ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು. ಘಟನೆಗೆ ಸಂಬಂಧಿಸಿದಂತೆ ನಂದಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಹಿರೇಮಠ್ ಅವರು ತಮ್ಮ ಕುಟುಂಬದೊಂದಿಗೆ ಗೋವಾ ಪ್ರವಾಸಕ್ಕೆ ತೆರಳಿದ್ದು, ಬಾಗಲಕೋಟೆಗೆ ಹಿಂತಿರುಗಿ ಬರುವಾಗ ಈ ದುರ್ಘಟನೆ ಸಂಭವಿಸಿದೆ. ಅವರ ಪಾರ್ಥಿವ ಶರೀರವನ್ನು ಧಾರವಾಡ ಸಿವಿಲ್ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಹಿರೇಮಠ್ ಅವರ ಸ್ವಗ್ರಾಮ ಬಾದಾಮಿಯ ಹೊಸೂರಿಯಲ್ಲಿದೆ.

Recent Comments

Leave Comments

footer
Top