• 16 October 2018 16:26
Jai Kannada
Jai Kannada
Blog single photo
January 13, 2018

ಐರಾವತ ಬಸ್ ಉರುಳಿಬಿದ್ದು 8 ಜನರ ದಾರುಣ ಸಾವು 

 ಬೆಂಗಳೂರು: ಹಾಸನ ಜಿಲ್ಲೆಯ ಕರೆಕೆರೆಯಲ್ಲಿ ಶನಿವಾರ ನಸುಕಿನಲ್ಲಿ ರಸ್ತೆಯ ಬದಿಯ ಕೊಳಕ್ಕೆ ಕೆಎಸ್‌ಆರ್‌ಟಿಸಿ ಬಸ್ ಉರುಳಿಬಿದ್ದಿದ್ದರಿಂದ ಕನಿಷ್ಠ 7 ಜನರು ಮೃತಪಟ್ಟ ಭೀಕರ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಅನೇಕ ಮಂದಿಗೆ ಗಾಯಗಳಾಗಿವೆ.ಘಟನೆಯಲ್ಲಿ ಬಸ್ ಚಾಲಕ ಶಿವಪ್ಪಾ ಚಲವಾದಿ ಹಾಗೂ ನಿರ್ವಾಹಕ ಲಕ್ಷ್ಮಣ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.

ಸುಮಾರು 3.30 ಗಂಟೆಗೆ ಬಸ್ ಚಾಲಕನಿಗೆ ಬಸ್ ಮೇಲೆ ನಿಯಂತ್ರಣ ತಪ್ಪಿದ್ದರಿಂದ ಬಸ್ ಕೊಳಕ್ಕೆ ಉರುಳಿಬಿತ್ತೆಂದು ಗೊತ್ತಾಗಿದೆ. ಐವರು ಸ್ಥಳದಲ್ಲೇ ಅಸುನೀಗಿದ್ದರೆ, ಇನ್ನಿಬ್ಬರು ಆಸ್ಪತ್ರೆಗೆ ಸಾಗಿಸುವ ಹಾದಿಯಲ್ಲಿ ಮೃತಪಟ್ಟಿದ್ದಾರೆ.

ನೋಂದಣಿ ಸಂಖ್ಯೆ ಕೆಎಒ1ಎಫ್‌‍8513 ಹೊಂದಿದ್ದ ವೊಲ್ವೊ ಬಸ್ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ತೆರಳುತ್ತಿತ್ತು. ಒಟ್ಟು 43 ಪ್ರಯಾಣಿಕರು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದು, ಬೆಂಗಳೂರಿನಿಂದ ಶುಕ್ರವಾರ ರಾತ್ರಿ 11.44ಕ್ಕೆ ವೊಲ್ವೊ ಬಸ್ ನಿರ್ಗಮಿಸಿತ್ತು. ಅಪಘಾತಕ್ಕೆ ನಿಖರ ಕಾರಣವನ್ನು ತಿಳಿಯಬೇಕಾಗಿದೆ.

Recent Comments

Leave Comments

footer
Top