• 15 December 2019 13:07
Jai Kannada
Jai Kannada
Blog single photo
July 05, 2019

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿರುವ ಬಜೆಟ್ ನಿರೀಕ್ಷೆಗಳು 

ನವದೆಹಲಿ:  ಇಂದು 2019-20ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಯಾಗಲಿರುವ ಹಿನ್ನೆಲೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಾರ್ಥ್ ಬ್ಲಾಕ್‌ನಲ್ಲಿರುವ ತಮ್ಮ ಕಚೇರಿಗೆ ಆಗಮಿಸಿದ್ದಾರೆ. ರಾಷ್ಟ್ರಪತಿಗೆ ಸಲ್ಲಿಸಲು ನಿರ್ಮಲಾ ಸೀತಾರಾಮನ್ ಬಜೆಟ್ ಪ್ರತಿಯನ್ನು ಹಿಡಿದುಕೊಂಡು ನೇರವಾಗಿ ರಾಷ್ಟ್ರಪತಿ ಭವನಕ್ಕೆ ತೆರಳಿ ಅವರ ಅವಗಾಹನೆಗೆ ಸಲ್ಲಿಸಲಿದ್ದಾರೆ. ಸರಿಯಾಗಿ 11 ಗಂಟೆಗೆ ಅವರು ಬಜೆಟ್ ಮಂಡನೆ ನೀಡಲಿದ್ದು, 10 ಗಂಟೆಗೆ ಕ್ಯಾಬಿನೆಟ್ ಸಭೆ ನಡೆಯಲಿದ್ದು, ಆ ಸಭೆಯಲ್ಲಿ ಬಜೆಟ್‌‌ಗೆ ಅನುಮೋದನೆ ಸಿಗಲಿದೆ.   ನಿರ್ಮಲಾ ಸೀತಾರಾಮನ್ ಮಂಡಿಸಲಿರುವ ಬಜೆಟ್ ಹೇಗಿರಲಿದೆ ಎಂಬ ಬಗ್ಗೆ ಕುತೂಹಲ ಮೂಡಿಸಿದೆ.

ಮೋದಿ ಸರ್ಕಾರದ ಬಜೆಟ್‌ನಲ್ಲಿ ಇರುವ ನಿರೀಕ್ಷೆಗಳು ಕೆಳಗಿನಂತಿವೆ
ಕೃಷಿ ಕ್ಷೇತ್ರದಲ್ಲಿ ರೈತರ ಆದಾಯ 2014ರೊಳಗೆ ದ್ವಿಗುಣಗೊಳಿಸಲು ನೀಲನಕ್ಷೆ
ರೈತರಿಗೆ ಒಂದು ಲಕ್ಷ ರೂ. ಬಡ್ಡಿ ರಹಿತ ಸಾಲ ಘೋಷಣೆ ನಿರೀಕ್ಷೆ, 5 ವರ್ಷದಲ್ಲಿ ಕೃಷಿ, ಗ್ರಾಮೀಣ ಕ್ಷೇತ್ರಕ್ಕೆ 25 ಲಕ್ಷ ಕೋಟಿ ರೂ. ಹೂಡಿಕೆ ನಿರೀಕ್ಷಿಸಲಾಗಿದೆ. ಮೋದಿ ಸರ್ಕಾರಕ್ಕಿರುವ ದೊಡ್ಡ ಸವಾಲು ಉದ್ಯೋಗ ಸೃಷ್ಟಿಯಾಗಿರುವುದರಿಂದ  ಕೈಗಾರಿಕೆ ಕ್ಷೇತ್ರದಿಂದ ಹೆಚ್ಚಿನ ಉದ್ಯೋಗ ಸೃಷ್ಟಿ ನಿರೀಕ್ಷಿಸಲಾಗಿದೆ. ಕೈಗಾರಿಕೆ ಸ್ನೇಹಿಯಾಗಿರುವಂತೆ ಕಾರ್ಮಿಕ ಕಾನೂನು ತರುತ್ತಾರೆಂದು ನಿರೀಕ್ಷಿಸಲಾಗಿದೆ. ಮೂಲಸೌಕರ್ಯ ಕ್ಷೇತ್ರಕ್ಕೆ 20 ಲಕ್ಷ ಕೋಟಿ ಹೂಡಿಕೆ ಮಾಡುವರೆಂದು ನಿರೀಕ್ಷಿಸಲಾಗಿದೆ.

ವಿಶ್ವಬ್ಯಾಂಕ್ ಪ್ರಕಾರ ಭಾರತದಲ್ಲಿ ವಾರ್ಷಿಕ 81 ಲಕ್ಷ ಉದ್ಯೋಗ ಸೃಷ್ಟಿಯಾದರೆ ನಿರುದ್ಯೋಗ ನಿವಾರಣೆಯಾಗುತ್ತದೆಂದು ತಿಳಿಸಿದೆ. ಹೂಡಿಕೆಗೆ ಉತ್ತೇಜನ ಸಿಕ್ಕಿದರೆ ಹೆಚ್ಚಿನ ಉದ್ಯೋಗ ಸೃಷ್ಟಿಯಾಗುತ್ತದೆ. ನೀರಿನ ಸಂರಕ್ಷಣೆಗೆ ಬಜೆಟ್‌ನಲ್ಲಿ ಆದ್ಯತೆ ಸಿಗುವ ನಿರೀಕ್ಷೆಯಿದೆ. ದೇಶದಲ್ಲಿ ಮುಂಗಾರು ಮಳೆ ಕಡಿಮೆಯಾಗಿದ್ದರಿಂದ ನೀರಿನ ಕೊರತೆ ಉಂಟಾಗಿದೆ. ಪೆಟ್ರೋಲ್ , ಡೀಸೆಲ್ ಮೇಲೆ ನೀರಿನ ಸೆಸ್ ಹೇರುವ ಮೂಲಕ ನೀರಿನ ಸದ್ಭಳಕೆಗೆ ಉಪಯೋಗಿಸುವ ನಿರೀಕ್ಷೆಯಿದೆ. ನೀರಿನ ಸರಿಯಾದ ಬಳಕೆಗೆ ಆದ್ಯತೆ ನೀಡಲು ಕಠಿಣ ಕ್ರಮವನ್ನು ಅನುಸರಿಸಲಾಗುತ್ತದೆ. ಮನೆ ನಿರ್ಮಾಣಕ್ಕೆ ಕಡಿಮೆ ಬಡ್ಡಿದರದಲ್ಲಿ ಸಾಲ ವ್ಯವಸ್ಥೆ ಮಾಡುವ ನಿರೀಕ್ಷೆಯಿದೆ.

Recent Comments

Leave Comments

footer
Top