• 20 October 2019 19:21
Jai Kannada
Jai Kannada
Blog single photo
July 02, 2019

ಕಾಲೇಜು ಡ್ರಾಪ್ ಔಟ್‌ಗಳಿಬ್ಬರು 860 ದಶಲಕ್ಷ ಡಾಲರ್ ಆಸ್ತಿ ಒಡೆಯರು

ನ್ಯೂಯಾರ್ಕ್ : ಅವರಿಬ್ಬರು ಕಾಲೇಜಿನಲ್ಲಿ ಒಂದು ವರ್ಷವೂ ಓದಿರಲಿಲ್ಲ. ಆದರೆ ಹೆನ್ರಿಕ್ ಡುಬುಗ್ರಾಸ್ (23) ಮತ್ತು ಪೆಡ್ರೋ ಫ್ರಾಂಕೆಶ್ಚಿ(22) ಫಿನ್ ಟೆಕ್ ಸ್ಟಾರ್ಪ್ ಅಪ್ ಬ್ರೆಕ್ಸ್ ಇಂಕ್. ಕಂಪನಿಯ ಸಂಸ್ಥಾಪಕರು ಮತ್ತು ಉನ್ನತ ಕಾರ್ಯನಿರ್ವಾಹಕರಾಗಿದ್ದಾರೆ. ಇತ್ತೀಚೆಗೆ ಈ ಕಂಪನಿಯ ಮೌಲ್ಯ 2.6 ಶತಕೋಟಿ ಡಾಲರ್‌ಗೆ ಏರಿಕೆಯಾಗಿದೆ. ಡುಬುಗ್ರಾಸ್ ಆನ್‌ಲೈನ್ ವಿಡಿಯೊ ಆಟದ ತಯಾರಿಕೆ ಕಂಪನಿ ಆರಂಭಿಸಿದಾಗ ಅವರಿಗೆ ಕೇವಲ 14 ವರ್ಷಗಳಾಗಿತ್ತು. ಪೇಟೆಂಟ್ ಉಲ್ಲಂಘನೆಗೆ ನೋಟೀಸ್ ಪಡೆದುಕೊಂಡು ಅದನ್ನು ಮುಚ್ಚಲಾಯಿತು. ಶೀಘ್ರದಲ್ಲೇ ಫ್ರಾನ್ಸೆಸ್ಚಿ ಜತೆ ಪೇಮೆಂಟ್ ಪ್ರೊಸೆಸರ್ ಪಾಗಾರ್-ಮಿ ಉದ್ಯಮಕ್ಕೆ ಹಾಕಿದರು.

ಅದರಲ್ಲಿ ಸುಮಾರು 150 ನೌಕರರಿದ್ದು, 2016ರಲ್ಲಿ ಅದನ್ನು ಮಾರಾಟ ಮಾಡಲಾಯಿತು. ಬಳಿಕ ಇವರಿಬ್ಬರು ಸ್ನೇಹಿತರು ಸ್ಟಾನ್ ಫೋರ್ಟ್ ವಿವಿಯಲ್ಲಿ ಸೇರಿಕೊಂಡರೂ ಪರೀಕ್ಷೆ ಪಾಸಾಗದೇ ಡ್ರಾಪ್ ಔಟ್ ಆಗಿದ್ದರು.  ಕಳೆದ ವರ್ಷ ತನ್ನ ಮೊದಲ ಉತ್ಪನ್ನ ಆರಂಭಿಸಿದ ಬ್ರೆಕ್ಸ್ ಕಂಪನಿ ಅದರ ಸಂಸ್ಥಾಪಕರು ಶ್ರೀಮಂತ ಉದ್ಯಮಿಗಳ ಸಾಲಿನಲ್ಲಿ ಸೇರುವಂತೆ ಮಾಡಿತು.

ಇಂದು ಕಂಪನಿಯಲ್ಲಿ ಅವರ ಪಾಲು ತಲಾ 430 ದಶಲಕ್ಷ ಡಾಲರ್‌ಗಳಾಗಿವೆ. 2 ವರ್ಷಗಳ ಹಿಂದೆ ಸ್ಥಾಪಿಸಲಾದ ಬ್ರೆಕ್ಸ್ ಕಂಪನಿ ಅತೀ ವೇಗದ ಅಮೆರಿಕದ ಕಂಪನಿಗಳಲ್ಲಿ ಒಂದಾಗಿ ಬಹುಶತಕೋಟಿ ಡಾಲರ್ ಮೌಲ್ಯದಿಂದ ಕೂಡಿದ್ದು, ಉಬರ್ ಟೆಕ್ನಾಲಜೀಸ್, ಲೈಮ್ ಮತ್ತು ಬರ್ಡ್ ರೈಡ್ಸ್ ಮುಂತಾದ ಸ್ಟಾರ್ಟ್ ಅಪ್‌ಗಳ ದರ್ಜೆಗೆ ಸೇರಿದೆ. ಕಂಪನಿಯ ಮುಖ್ಯ ಉತ್ಪನ್ನ ಸ್ಟಾರ್ಟ್‌ಅಪ್‌ಗಳಿಗೆ ಮತ್ತು ಅವುಗಳ ನೌಕರರಿಗೆ ಕ್ರೆಡಿಟ್ ಕಾರ್ಡ್ ಒದಗಿಸುವುದು.

Recent Comments

Leave Comments

footer
Top