• 17 January 2019 21:34
Jai Kannada
Jai Kannada
Blog single photo
January 13, 2018

ಕರಾವಳಿಯಲ್ಲಿ  ರೌಡಿಶೀಟರ್ ಇಲಿಯಾಸ್ ಹತ್ಯೆ 

ಮಂಗಳೂರು: ಕರಾವಳಿಯಲ್ಲಿ ಇನ್ನೊಂದು ಹತ್ಯೆ ನಡೆಯುವುದರೊಂದಿಗೆ ಮತ್ತೆ ಪ್ರಕ್ಷುಬ್ಧ ಸ್ಥಿತಿಗೆ ಜಾರಿದೆ. ದೀಪಕ್ ರಾವ್ ಮತ್ತು ಬಶೀರ್ ಹತ್ಯೆಗಳ ಬಳಿಕ ಸ್ವಲ್ಪ ಕಾಲ ಕರಾವಳಿಯಲ್ಲಿ ಶಾಂತ ಸ್ಥಿತಿ ನೆಲೆಸಿತ್ತು. ಮಂಗಳೂರಿನ ಜಪ್ಪಿನಮೊಗರಿನ ಕುದ್ಪಾಡಿಯಲ್ಲಿ ಟಾರ್ಗೆಟ್ ಗ್ರೂಪಿನ ಇಲಿಯಾಸ್(31)ನನ್ನು ಇಂದು ಬೆಳಿಗ್ಗೆ ದುಷ್ಕರ್ಮಿಗಳು ಕೊಚ್ಚಿ ಕೊಲೆಗೈದಿದ್ದಾರೆ.

ಕಾಂಗ್ರೆಸ್ ಕಾರ್ಯಕರ್ತನಾಗಿದ್ದ ಇಲಿಯಾಸ್ ಮಂಗಳೂರಿನ ಇಲ್ಯಾಸ್ ಫ್ಲಾಟ್‌ನಲ್ಲಿ ಮಲಗಿದ್ದ ವೇಳೆಯಲ್ಲಿ ಇಬ್ಬರು ಅಪರಿಚಿತರು ಮನೆಗೆ ನುಗ್ಗಿ ಕೊಚ್ಚಿ ಕೊಲೆ ಮಾಡಿದ್ದಾರೆ.

 ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಹಲ್ಲೆ ಆರೋಪದ ಮೇಲೆ ಜೈಲು ಸೇರಿದ್ದ ಇಲಿಯಾಸ್ 2 ದಿನಗಳ ಹಿಂದೆ ಜೈಲಿನಿಂದ ಬಿಡುಗಡೆಯಾಗಿ ಮನೆಗೆ ಬಂದಿದ್ದ. ಆತನು ಬಿಡುಗಡೆಯಾಗಿರುವ ವಿಷಯ ಮತ್ತು ಮನೆಯಲ್ಲಿ ಒಬ್ಬನೇ ಇದ್ದಾನೆಂಬ ವಿಷಯ ತಿಳಿದ ದುಷ್ಕರ್ಮಿಗಳು ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.

ಹತ್ಯೆಯಾದ ಇಲಿಯಾಸ್ ಯಾರು?
ಇಲಿಯಾಸ್ ಗುಂಪಿನವರು ಕದ್ದ ಕಾರುಗಳನ್ನು ಮಾರಲು ಟಾರ್ಗೆಟ್ ಗ್ರೂಪ್ ತೆರೆದಿದ್ದರು. ಗಾಂಜಾ ಗ್ರೂಪ್ ತಡೆಯಲು ಹೋಗಿದ್ದ ಜುಬೇರ್ ಕೊಲೆ ಯತ್ನ ಮಾಡಿದ್ದರು. ಇಲಿಯಾಸ್ ಗ್ಯಾಂಗ್ ಪೊಲೀಸ್ ಅಧಿಕಾರಿಗಳ ಮೇಲೆ ದಾಳಿ ಮಾಡುತ್ತಿದ್ದರು. ಮೆಡಿಕಲ್ ಕಾಲೇಜು ವಿದ್ಯಾರ್ಥಿನಿಯನ್ನು ಅಪಹರಿಸಿದ ಕೇಸ್ ಕೂಡ ಅವರ ಮೇಲಿತ್ತು.

ಗಾಂಜಾ ಗ್ರೂಪ್ ವಿರುದ್ಧ ದನಿ ಎತ್ತಿದವರನ್ನು ಈ ತಂಡ ಭೀಕರ ಹತ್ಯೆ ಮಾಡಲು ಯತ್ನಿಸುತ್ತಿತ್ತು. ಅಪರಾಧ ಪತ್ತೆದಳದ ಪೊಲೀಸರು ಇಲಿಯಾಸ್ ವಿಷಯವನ್ನು ಬಹಿರಂಗ ಮಾಡಿದ್ದಾರೆ. ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು ಇಲಿಯಾಸ್‌ನನ್ನು ಬಂಧಿಸಿದ್ದರು. ಕೆಲವು ಕಾಲ ಜೈಲಿನಲ್ಲಿದ್ದ ಇಲಿಯಾಸ್ 2 ದಿನಗಳ ಹಿಂದೆ ಬಿಡುಗಡೆಯಾಗಿ ಮನೆಗೆ ಬಂದಿದ್ದ.

Recent Comments

Leave Comments

footer
Top