ಲಂಡನ್: ಎಡ್ಜ್ಬಾಸ್ಟನ್ನಲ್ಲಿ ನಡೆದ ವಿಶ್ವ ಕಪ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಇಂಗ್ಲೆಂಡ್ ತಂಡ ಭಾರತವನ್ನು 31 ರನ್ಗಳಿಂದ ಸೋಲಿಸುವ ಮಲೂಕ ಸೆಮಿಫೈನಲ್ ತಲುಪುವ ಆಸೆಯನ್ನು ಜೀವಂತವಾಗಿರಿಸಿದೆ. ಇಂಗ್ಲೆಂಡ್ ತಂಡಕ್ಕೆ ಇನ್ನು ನ್ಯೂಜಿಲೆಂಡ್ ವಿರುದ್ಧ ಒಂದು ಪಂದ್ಯ ಆಡಬೇಕಾಗಿದ್ದು, ನ್ಯೂಜಿಲೆಂಡ್ ವಿರುದ್ಧ ಗೆಲುವು ಗಳಿಸಿದರೆ ಅದರ ಸೆಮಿಫೈನಲ್ ಆಸೆ ಜೀವಂತವಾಗುಳಿಯಲಿದೆ.
ನಿನ್ನೆ ನಡೆದ ಪಂದ್ಯದಲ್ಲಿ ರೋಹಿತ್ ಶರ್ಮಾ ಭಾರತದ ಪರ ಟಾಪ್ ಸ್ಕೋರ್ ಮಾಡಿ 102 ರನ್ ಬಾರಿಸಿದರೂ ಕೂಡ ಭಾರತ ವಿಶ್ವಕಪ್ನಲ್ಲಿ ಮೊದಲ ಸೋಲಿನ ರುಚಿಯನ್ನು ಕಂಡಿತು. 338 ಭಾರೀ ಮೊತ್ತದ ಬೆನ್ನಟ್ಟಿದ ಭಾರತ ಮೂರನೇ ಓವರಿನಲ್ಲಿ ಸೊನ್ನೆ ರನ್ನಿಗೆ ರಾಹುಲ್ ವಿಕೆಟ್ ಕಳೆದುಕೊಂಡಿತು. ವಿರಾಟ್ ಕೊಹ್ಲಿ 66 ರನ್ ಮಾಡಿ ಔಟಾದ ಬಳಿಕ ಭಾರತಕ್ಕೆ ಸಂಕಷ್ಟದ ಸ್ಥಿತಿ ಎದುರಾಗಿತ್ತು. ಲಿಯಾಮ್ ಪ್ಲಂಕೆಟ್ ಇಂಗ್ಲೆಂಡ್ ಪರ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿ 55ಕ್ಕೆ 3 ವಿಕೆಟ್ ಕಬಳಿಸಿದರು.
ಹಾರ್ದಿಕ್ ಪಾಂಡ್ಯ ಮತ್ತು ಧೋನಿ ವೇಗದಲ್ಲಿ ರನ್ ಗಳಿಸಲು ಯತ್ನಿಸಿದರಾದರೂ ಇಂಗ್ಲೆಂಡ್ ಬೌಲರುಗಳು ಬಿಗಿ ಬೌಲಿಂಗ್ನಿಂದ ರನ್ ಗಳಿಸಲಾಗಲಿಲ್ಲ. ಭಾರತದ ಪರ ಸ್ಪಿನ್ನರುಗಳ ಬೌಲಿಂಗ್ಗೆ ಇಂಗ್ಲೆಂಡ್ ಆಟಗಾರರು ಎರ್ರಾಬಿರ್ರಿ ಬಾರಿಸಿದ್ದರು. ಬೌಂಡರಿಗಳನ್ನು, ಸಿಕ್ಸರುಗಳನ್ನು ತಡೆಯಲು ವಿಫಲರಾದ ಸ್ಪಿನ್ನರುಗಳನ್ನು ಇಂಗ್ಲೆಂಡ್ ಆಟಗಾರರು ಮನಬಂದಂತೆ ದಂಡಿಸಿದರು. ಸ್ಪಿನ್ ಅವಳಿಗಳು ಒಟ್ಟು 160 ರನ್ಗಳನ್ನು ಇಂಗ್ಲೆಂಡ್ ತಂಡಕ್ಕೆ ಧಾರೆಯೆರೆದು ಕೊಟ್ಟರು. ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ವಿರುದ್ಧ ಸೋಲಪ್ಪಿದ ಇಂಗ್ಲೆಂಡ್ ತಂಡ ಭಾರತದ ವಿರುದ್ಧ ಗೆಲುವು ಗಳಿಸಿ 10 ಪಾಯಿಂಟ್ ಮುಟ್ಟಿದೆ.
Recent Comments