• 19 January 2018 05:31
Jai Kannada
Jai Kannada
Blog single photo
January 12, 2018

ಸಿನಿಮೀಯ ರೀತಿಯಲ್ಲಿ ರೋಲೆಕ್ಸ್ ವಾಚ್ ಕಳ್ಳತನ 

ಫ್ಲೋರಿಡಾ: ಅಮೆರಿಕಾದ ಪ್ಲೋರಿಡಾದ ಮಾಲ್‍ವೊಂದರಲ್ಲಿ ಪಟಾಕಿ ಸಿಡಿಸುವ ಮೂಲಕ ಸಿನಿಮೀಯ ರೀತಿಯಲ್ಲಿ 7 ಲಕ್ಷ ರೂ. ಮೌಲ್ಯದ ರೋಲೆಕ್ಸ್ ವಾಚ್ ಕಳ್ಳತನ ಮಾಡಿರೋ ಘಟನೆ ಸಂಭವಿಸಿದೆ. ಇಲ್ಲಿನ ಸಿಟಿ ಆಫ್ ಸನ್‌ರೈಸ್‌ನ ಸಾಗ್ರಾಸ್ ಮಿಲ್ಸ್ ಮಾಲ್‌ನಲ್ಲಿ ಹೊಸ ವರ್ಷದ ಹಿಂದಿನ ದಿನ ಈ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ.

ಇಬ್ಬರು ಅಂಗಡಿಯೊಳಗೆ ಪ್ರವೇಶಿಸಿ ಒಬ್ಬ   11, 400 ಡಾಲರ್ ಮೌಲ್ಯದ ಈ  ರೋಲೆಕ್ಸ್ ವಾಚ್ ಕೈಗೆ ಹಾಕಿಕೊಂಡು ನೋಡುತ್ತಿದ್ದ. ಇನ್ನೊಬ್ಬ ದೂರದಲ್ಲೇ ಪಟಾಕಿ ಸಿಡಿಸಿದ್ದರಿಂದ ಬಾಂಬ್ ಎಂದು ಹೆದರಿಕೊಂಡು ಅಲ್ಲಿದ್ದ ಸಿಬ್ಬಂದಿ ಸೇರಿದಂತೆ ಗ್ರಾಹಕರು ಕೂಡ ಓಡಿಹೋದರು.

ಸಿಬ್ಬಂದಿ ವಾಪಸ್ ಬಂದು ನೋಡುವಷ್ಟರಲ್ಲಿ 7 ಲಕ್ಷ ರೂ. ಮೌಲ್ಯದ ರೋಲೆಕ್ಸ್ ವಾಚ್ ಸಮೇತ ಗ್ರಾಹಕ ನಾಪತ್ತೆಯಾಗಿದ್ದ. ಈ ಘಟನೆಯ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ.

Recent Comments

Leave Comments

footer
Top