ಲಂಡನ್: ಟ್ರೆಂಟ್ ಬೌಲ್ಟ್ ವಿಶ್ವಕಪ್ನಲ್ಲಿ ಹ್ಯಾಟ್ರಿಕ್ ಸಂಪಾದಿಸಿದ ಮೊದಲ ನ್ಯೂಜಿಲೆಂಡ್ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಆದರೆ ಚಾಂಪಿಯನ್ಸ್ ಆಸ್ಟ್ರೇಲಿಯಾ ಶನಿವಾರ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 86 ರನ್ ಜಯಗಳಿಸುವುದಕ್ಕೆ ಅದು ಯಾವುದೇ ಅಡ್ಡಿಯಾಗಲಿಲ್ಲ. 2015ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಆಸ್ಟ್ರೇಲಿಯಾ ಗೆಲುವಿನ ಪುನರಾವರ್ತನೆಯಂತೆ ಇದು ಕಂಡುಬಂತು.
ಬೌಲ್ಟ್ ಅವರು ಉಸ್ಮಾನ್ ಖ್ವಾಜಾ, ಮಿಚೆಲ್ ಸ್ಟಾರ್ಕ್ ಮತ್ತು ಜಾಸನ್ ಬೆಹೆರೆನ್ಡ್ರಾಫ್ ಅವರನ್ನು ಸತತ ಮೂರು ಎಸೆತಗಳಲ್ಲಿ ಔಟ್ ಮಾಡುವ ಮೂಲಕ ಹ್ಯಾಟ್ರಿಕ್ ಸಂಪಾದಿಸಿದರು. ಆಸ್ಟ್ರೇಲಿಯಾ ಒಂದು ಹಂತದಲ್ಲಿ 22 ಓವರುಗಳಲ್ಲಿ 92ಕ್ಕೆ 5 ವಿಕೆಟ್ ಕಳೆದುಕೊಂಡು ಶೋಚನೀಯ ಸ್ಥಿತಿಯಲ್ಲಿತ್ತು. ಆದರೆ ಕೊನೆಗೆ 9 ವಿಕೆಟ್ಗೆ 243 ರನ್ ಗಳಿಸುವಲ್ಲಿ ಯಶಸ್ವಿಯಾಯಿತು. ಬೌಲ್ಟ್ ಹ್ಯಾಟ್ರಿಕ್ಗೆ ಬಲಿಪಶುಗಳಾದ ಮೂವರು ಆಟಗಾರರು ಆಸ್ಟ್ರೇಲಿಯಾದ ಗೆಲುವಿನಲ್ಲಿ ಗಮನಾರ್ಹ ಪಾತ್ರವಹಿಸಿದರು.
ಬೌಲ್ಟ್ಗೆ ವಿಕೆಟ್ ಕಳೆದುಕೊಂಡಿದ್ದ ಕ್ವಾಜಾ ಅವರು ಅಲೆಕ್ಸ್ ಜತೆಯಾಟದಲ್ಲಿ ಉತ್ತಮ ಸ್ಕೋರು ಗಳಿಸಿದರು. ಕ್ವಾಜಾ 88 ರನ್ ಗಳಿಸಿದರೆ, ಕ್ಯಾರಿ 71 ರನ್ ಗಳಿಸಿ ಕೆಳ ಕ್ರಮಾಂಕದಲ್ಲಿ ಆಸ್ಟ್ರೇಲಿಯಾಕ್ಕೆ ಬಲ ತುಂಬಿದರು. ಬೆಹೆರೆನ್ ಡಾರ್ಫ್ ಆರಂಭದಲ್ಲೇ ತಮ್ಮ ಮೊನಚಿನ ಬೌಲಿಂಗ್ ಮೂಲಕ ನ್ಯೂಜಿಲೆಂಡ್ಗೆ ಪೆಟ್ಟು ನೀಡಿದರು ಮತ್ತು ಸ್ಟಾರ್ಕ್ 26 ರನ್ ನೀಡಿ 5 ವಿಕೆಟ್ ಕಬಳಿಸಿ ಕಿವೀಸ್ ಪತನಕ್ಕೆ ನಾಂದಿ ಹಾಡಿದರು. ಕಿವೀಸ್ ತಂಡ 44 ಓವರುಗಳಲ್ಲಿ 157 ರನ್ ಗಳಿಸಿ ಆಲೌಟ್ ಆಗುವ ಮುೂಲಕ ಆಸ್ಟ್ರೇಲಿಯಾ ಭರ್ಜರಿ ಗೆಲುವು ಸಾಧಿಸಿತು.
Recent Comments