• 20 October 2019 19:37
Jai Kannada
Jai Kannada
Blog single photo
June 24, 2019

 ಸಂಕಷ್ಟದ ಸ್ಥಿತಿಯಲ್ಲಿರುವ ಬಿಎಸ್ಸೆನ್ನೆಲ್ ನಿರ್ವಹಣೆಗೆ ಹಣಕಾಸು ಕೋರಿಕೆ 

 ನವದೆಹಲಿ: ಸರ್ಕಾರಿ ಸ್ವಾಮ್ಯದ ರೋಗಗ್ರಸ್ಥ ಬಿಎಸ್ಸೆನ್ನೆಲ್ ಸಂಸ್ಥೆಯು ಸರ್ಕಾರಕ್ಕೆ ಎಸ್‌ಒಎಸ್ ಕಳಿಸಿ, ತಕ್ಷಣವೇ ಹಣಕಾಸು ನೆರವು ನೀಡದಿದ್ದರೆ ಕಾರ್ಯಾಚರಣೆ ನಡೆಸುವುದು ಕಷ್ಟ ಎಂದು ಎಚ್ಚರಿಸಿದೆ. ಜೂನ್‌ನಲ್ಲಿ 850 ಕೋಟಿ ರೂ. ವೇತನ ಬಾಧ್ಯತೆ ನಿರ್ವಹಿಸುವುದು ಕಷ್ಟವಾಗಿದ್ದು, ಸುಮಾರು ಬಾಕಿಯಿರುವ 13000 ಕೋಟಿ ರೂ. ಗಿಂತ ಹೆಚ್ಚು ಸಾಲದಿಂದ ಅದರ ವ್ಯವಹಾರ ನಡೆಸುವುದು ಕಷ್ಟವಾಗಿದೆ ಎಂದು ತಿಳಿಸಿದೆ.

ಮಾಸಿಕ ಆದಾಯಗಳು ಮತ್ತು ವೆಚ್ಚಗಳ ನಡುವೆ ಅಂತರವು ಮುಂದುವರಿದಿರುವುದು ಆತಂಕಕಾರಿಯಾಗಿದ್ದು, ಸಾಕಷ್ಟು ಬಂಡವಾಳ ಹಾಕದಿದ್ದರೆ ಬಿಎಸ್ಸೆನ್ನೆಲ್ ಕಾರ್ಯನಿರ್ವಹಣೆ ಅಸಾಧ್ಯವಾಗಿದೆ ಎಂದು ಬಿಎಸ್ಸೆನ್ನೆಲ್ ಹಿರಿಯ ಪ್ರಧಾನ ವ್ಯವಸ್ಥಾಪಕ ಪತ್ರದಲ್ಲಿ ತಿಳಿಸಿದ್ದಾರೆ. ಕಳೆದವಾರ ಕಳಿಸಿದ ಪತ್ರದಲ್ಲಿ, ರೋಗಗ್ರಸ್ಥ ನಿಗಮದ ಭವಿಷ್ಯ ನಿರ್ಧರಿಸುವ ಮುಂದಿನ ಕ್ರಮದ ಬಗ್ಗೆ ಸರ್ಕಾರದ ಸಲಹೆಯನ್ನು ಕೇಳಿದೆ. ಬಿಎಸ್ಸೆನ್ನೆಲ್ ದೇಶದ ಅತ್ಯಂತ ನಷ್ಟ ಅನುಭವಿಸುತ್ತಿರುವ ಸಾರ್ವಜನಿಕ ವಲಯದ ಕಂಪನಿಯಾಗಿದ್ದು, 2018ರ ಡಿಸೆಂಬರ್ ಕೊನೆಯಲ್ಲಿ ಬಿಎಸ್ಸೆನ್ನೆಲ್ ನಿರ್ವಹಣೆಯ ಒಟ್ಟು ನಷ್ಟ 90000 ಕೋಟಿ ರೂ. ದಾಟಿದೆ ಎಂದು  ಕೋಟಕ್ ಸಾಂಸ್ಥಿಕ ಈಕ್ವಿಟೀಸ್ ವರದಿ ಮಾಡಿದೆ. ಮರುರಚನೆಯ ಮಾತುಕತೆ ನಡುವೆ ಯಾವುದೇ ಪುನಶ್ಚೇತನದ ನೀಲನಕ್ಷೆ ನೀಡುವಲ್ಲಿ ಸರ್ಕಾರ ವಿಫಲವಾಗಿದ್ದು, ಕಂಪನಿಯ ಆಯಕಟ್ಟಿನ ಪ್ರಾಮುಖ್ಯತೆ ಕಾರಣದಿಂದ ಅದನ್ನು ಮುಚ್ಚುವುದಕ್ಕೆ ಕೂಡ ಹಿಂಜರಿದಿದೆ.

  ನೌಕರರ ವೇತನಗಳು ಮತ್ತು ಸೌಲಭ್ಯಗಳಿಗೆ ಕಂಪನಿಯ ಹಣ ಹರಿದುಹೋಗುತ್ತಿದೆ. ನೌಕರರ ವೆಚ್ಚಗಳು ಸೇರಿದಂತೆ ನಿವೃತ್ತಿ ಸೌಲಭ್ಯಗಳು ಬಿಎಸ್ಸೆನ್ನೆಲ್ ನಿರ್ವಹಣೆ ಆದಾಯಗಳ ಶೇ. 66ರಷ್ಟೆಂದು ಅಂದಾಜು ಮಾಡಲಾಗಿದೆ. ಸಾಲಗಾರರು ಮತ್ತು ಪೂರೈಕೆದಾರರು ಕೂಡ ತೊಂದರೆಯಾಗಿದ್ದು, ಕಂಪನಿ ತುಂಬಾ ಬಾಕಿವುಳಿಸಿಕೊಂಡಿದೆ. ಎಂಟಿಎನ್‌ಎಲ್ ಈಗಾಗಲೇ ಮೃತವಾಗಿದ್ದು, ಬಿಎಸ್ಸೆನ್ನೆಲ್ ಐಸಿಯುನಲ್ಲಿದೆ. ಸರ್ಕಾರದ ಅತಿಕ್ರಮಣದಿಂದ ಸಾರ್ವಜನಿಕ ವಲಯದ ಕಂಪನಿಗಳ ವ್ಯವಸ್ಥಿತ ನಾಶ ಉಂಟಾಗುತ್ತಿದೆ ಎಂದು ಟೆಲಿಕಾಂ ಕೈಗಾರಿಕೆಯ ವಿಶ್ಲೇಷಕ ಬಿಕೆ ಸಿಂಗಾಲ್ ತಿಳಿಸಿದ್ದಾರೆ. ಕೈಗಳನ್ನು ಮತ್ತು ಕಾಲುಗಳನ್ನು ಕಟ್ಟಿದ ವ್ಯಕ್ತಿ ಹೇಗೆ ನೀರಿನಲ್ಲಿ ಈಜಬಲ್ಲ ಎಂದು ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ.

Recent Comments

Leave Comments

footer
Top