• 19 January 2018 05:31
Jai Kannada
Jai Kannada
Blog single photo
January 11, 2018

ಭಾರತೀಯ ಯೋಧರ ತೀಕ್ಷ್ಣ ಪ್ರತಿರೋಧಕ್ಕೆ ಪಾಕ್ ತಲ್ಲಣ 

ನವದೆಹಲಿ: ಗಡಿಯಾಚೆಯಿಂದ ಮನಬಂದಂತೆ ಗುಂಡುಹಾರಿಸುತ್ತಾ ಭಾರತೀಯ ಯೋಧರ ನಿದ್ದೆ ಕೆಡಿಸಿದ್ದ ಪಾಕಿಸ್ತಾನಕ್ಕೆ ಈಗ ಚಿಂತೆ ಷುರುವಾಗಿದೆ.ಭಾರತ ಸೇನೆ ಮತ್ತು ಗಡಿಭದ್ರತಾ ಪಡೆ ಗಡಿಯಾಚೆಗಿನ ಗುಂಡಿನ ದಾಳಿಗೆ ಚುರುಕಿನ ಮತ್ತು ತೀಕ್ಷ್ಣ ಪ್ರತಿಕ್ರಿಯೆ ನೀಡುತ್ತಿದ್ದು, ಪಾಕಿಸ್ತಾನಿ ಪಡೆಗಳು ಜೀವರಕ್ಷಣೆಗೆ ಅಡಗಿಕೊಳ್ಳುತ್ತಿವೆ.

 ತನ್ನ ಸೇನಾಧಿಕಾರಿಗಳು ಮತ್ತು ಸೈನಿಕರು ಭಾರತೀಯ ಯೋಧರ ಗುಂಡಿಗೆ ಹೆಚ್ಚೆಚ್ಚು ಬಲಿಯಾಗುತ್ತಿರುವುದನ್ನು ಕಂಡು ಐಎಸ್‌ಐಗೆ ಮೈನಡುಕ ಶುರುವಾಗಿದೆ.

ಭಾರತೀಯ ಪಡೆಗಳು ಮಾರಣಾಂತಿಕ ದಾಳಿ ನಡೆಸುವ ಮೂಲಕ  ಪ್ರತಿರೋಧ ಒಡ್ಡುತ್ತಿರುವ ಹಿನ್ನೆಲೆಯಲ್ಲಿ ಭಾರತ ವಿರೋಧಿ ಕಾರ್ಯಾಚರಣೆ ನಡೆಸುವುದು ಐಎಸ್‌ಐಗೆ ತೀವ್ರ ಕಠಿಣವಾಗಿ ಪರಿಣಮಿಸಿದೆ ಎಂದು ಗುಪ್ತಚರ ಇಲಾಖೆ ಸಂಗ್ರಹಿಸಿರುವ ಮಾಹಿತಿ ತಿಳಿಸಿದೆ.

ಭಾರತೀಯ ಭದ್ರತಾ ಪಡೆಗಳು ಗಡಿಯಲ್ಲಿ ಪಹರೆ ಮತ್ತು ವೈಮಾನಿಕ ಗಸ್ತನ್ನು ಹೆಚ್ಚಿಸಿದ್ದರಿಂದ ಭಾರತದ ಪಡೆಗಳು ಮತ್ತು ಗಡಿ ಚೌಕಿಗಳ ಮೇಲೆ ಹಠಾತ್ ದಾಳಿ ನಡೆಸುವ ಪಾಕಿಸ್ತಾನದ ಯೋಜನೆ ಮಣ್ಣುಪಾಲಾಗಿದೆ.
 ಪ್ರತಿ ಬಾರಿ ಗಡಿಯಾಚೆ ಚೌಕಿಗಳು ಮತ್ತು ಪಡೆಗಳ ಮೇಲೆ ದಾಳಿ ನಡೆಸಿದಾಗಲೆಲ್ಲ ಭಾರತ ಅದಕ್ಕೆ ಭಯಾನಕ ರೀತಿಯಲ್ಲಿ ಸ್ಪಂದಿಸುತ್ತಿರುವ ರೀತಿ ಕಂಡು ಪಾಕ್ ತಲ್ಲಣಗೊಂಡಿದೆ.

Recent Comments

Leave Comments

footer
Top